ಭಾನುವಾರ, ಜುಲೈ 25, 2021
25 °C
69 ಮಂದಿಗೆ ಸೋಂಕು ದೃಢ: ಮೂಲ ತಿಳಿಯದ ಪ್ರಕರಣಗಳು 37

ಕಾರವಾರ | ಕೋವಿಡ್‌ನಿಂದ 99 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಆಸ್ಪತ್ರೆಗಳಲ್ಲಿ ಕೋವಿಡ್‌ 19ಗೆ ಚಿಕಿತ್ಸೆ ಪಡೆಯುತ್ತಿದ್ದ 99 ಮಂದಿ ಗುಣಮುಖರಾಗಿದ್ದು, ಭಾನುವಾರ ಮನೆಗಳಿಗೆ ತೆರಳಿದ್ದಾರೆ. ಅವರಲ್ಲಿ ಭಟ್ಕಳ ತಾಲ್ಲೂಕು ಒಂದರಿಂದಲೇ 75 ಮಂದಿ ಸೇರಿದ್ದಾರೆ.

ಶಿರಸಿಯ ಆಸ್ಪತ್ರೆಯಲ್ಲಿ ಚಿಕಿತ‌್ಸೆ ಪಡೆದ 17 ಮಂದಿ ಸೋಂಕುಮುಕ್ತರಾಗಿದ್ದಾರೆ. ಕುಮಟಾದಲ್ಲಿ ನಾಲ್ವರು, ಹಳಿಯಾಳದಲ್ಲಿ ಇಬ್ಬರು ಹಾಗೂ ಸಿದ್ದಾಪುರದಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 445 ಮಂದಿ ಕೋವಿಡ್‌ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. 630 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

69 ಮಂದಿಗೆ ಸೋಂಕು: ಜಿಲ್ಲೆಯ 69 ಮಂದಿಗೆ ಕೋವಿಡ್ 19 ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಭಾನುವಾರದ ವರದಿ ಮಾಹಿತಿ ನೀಡಿದೆ. ಈ ಪೈಕಿ ಕುಮಟಾ ತಾಲ್ಲೂಕಿನಲ್ಲಿ 17 ಮಂದಿಗೆ ಖಚಿತವಾಗಿದೆ.

ಯಲ್ಲಾಪುರ ತಾಲ್ಲೂಕಿನಲ್ಲಿ 12 ಜನರಿಗೆ, ಅಂಕೋಲಾ ತಾಲ್ಲೂಕಿನಲ್ಲಿ 10, ಭಟ್ಕಳ, ಕಾರವಾರ ಹಾಗೂ ಮುಂಡಗೋಡ ತಾಲ್ಲೂಕುಗಳಲ್ಲಿ ತಲಾ ಆರು, ಹೊನ್ನಾವರ ತಾಲ್ಲೂಕಿನಲ್ಲಿ ನಾಲ್ವರು, ಸಿದ್ದಾಪುರ ತಾಲ್ಲೂಕಿನಲ್ಲಿ ಮೂವರು, ಶಿರಸಿ ಹಾಗೂ ಜೊಯಿಡಾ ತಾಲ್ಲೂಕಿನಲ್ಲಿ ತಲಾ ಇಬ್ಬರು ಮತ್ತು ಹಳಿಯಾಳ ತಾಲ್ಲೂಕಿನಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ.

37 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಏಳು ಮಂದಿಗೆ ಬೇರೆ ರಾಜ್ಯಗಳಿಂದ, ನಗರಗಳಿಂದ ಪ್ರಯಾಣಿಸಿರುವ ಹಿನ್ನೆಲೆಯಿದೆ. ಆರು ಮಂದಿಗೆ ಜ್ವರದ (ಐ.ಎಲ್.ಐ) ಲಕ್ಷಣಗಳಿವೆ. ಒಬ್ಬರಿಗೆ ಉಸಿರಾಟದ ತೀವ್ರ ಸಮಸ್ಯೆ (ಎಸ್.ಎ.ಆರ್.ಐ) ಇರುವುದು ಆರೋಗ್ಯ ತಪಾಸಣೆಯ ವೇಳೆ ಗೊತ್ತಾಗಿದೆ.

ಆರೈಕೆ ಕೇಂದ್ರಕ್ಕೆ ದಾಖಲು: ಕೋವಿಡ್ 19 ಸೋಂಕಿತರಲ್ಲಿ ರೋಗ ಲಕ್ಷಣಗಳು ಇಲ್ಲದವರನ್ನು ಬಿ.ಸಿ.ಎಂ ವಸತಿ ನಿಲಯದಲ್ಲಿ ಆರಂಭಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಅವರೆಲ್ಲರಿಗೂ ಸರ್ಕಾರದ ಮಾರ್ಗಸೂಚಿಯ ಪ್ರಕಾರವೇ ಅಲೋಪಥಿ ಶೈಲಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

1,085 - ಒಟ್ಟು ಸೋಂಕಿತರು

630 -ಸಕ್ರಿಯ ಪ್ರಕರಣಗಳು

445 -ಗುಣಮುಖರಾದವರು

10 ‌-ಮೃತರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು