ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿಯ ಹೂಡ್ಲಮನೆ ಕ್ರಾಸ್‌ ಸಮೀಪ ಅವಧಿ ಮೀರಿದ 4 ಕ್ವಿಂಟಾಲ್‌ ಚಾಕ್ಲೆಟ್‌ ರಾಶಿ

Last Updated 15 ಜುಲೈ 2021, 7:56 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೂಡ್ಲಮನೆ ಕ್ರಾಸ್ ಸಮೀಪ ಎರಡು ದಿನಗಳ ಹಿಂದೆ ಎಸೆಯಲ್ಪಟ್ಟಿದ್ದ ಅವಧಿ ಮೀರಿದ ನಾಲ್ಕು ಕ್ವಿಂಟಲ್ ಗೂ ಹೆಚ್ಚಿನ ಚಾಕ್ಲೆಟ್ ರಾಶಿಯನ್ನು ಬುಧವಾರ ಸಂಜೆ ಗ್ರಾಮಸ್ಥರು ತೆರವುಗೊಳಿಸಿದ್ದಾರೆ.

ನಗರದಿಂದ ಸುಮಾರು ಆರು ಕಿಲೋ ಮೀಟರ್ ದೂರದಲ್ಲಿರುವ ಹಳ್ಳಿಯ ರಸ್ತೆ ಪಕ್ಕ ರಾಶಿಗಟ್ಟಲೆ ಚಾಕ್ಲೆಟ್ ಸುರಿದಿದ್ದು ಮಂಗಳವಾರ ಕಂಡುಬಂದಿತ್ತು. ಚಾಕ್ಲೆಟ್ ರಾಶಿ ಕಂಡ ಸ್ಥಳೀಯ ಮಕ್ಕಳು ಕೆಲವನ್ನು ಎತ್ತಿಕೊಂಡು ತಿಂದಿದ್ದರು.

ಚಾಕ್ಲೆಟ್ ರಾಶಿ ಹರಡಿಕೊಂಡಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಸ್ಥಳೀಯರ ದೂರು ಆಧರಿಸಿ ಸ್ಥಳಕ್ಕೆ ನಗರಸಭೆ, ಗ್ರಾಮ ಪಂಚಾಯ್ತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಗ್ರಾಮ ಪಂಚಾಯ್ತಿ ಸಿಬ್ಬಂದಿ ಜತೆ ಸ್ಥಳೀಯರು ಸೇರಿ ಸಮೀಪದಲ್ಲೇ ಹೊಂಡ ತೆಗೆದು ಚಾಕ್ಲೆಟ್ ರಾಶಿಯನ್ನು ವಿಲೇವಾರಿ ಮಾಡಿದ್ದಾರೆ.

'ಶಿರಸಿ ನಗರದ ವ್ಯಾಪಾರಿಗೆ ಸೇರಿದ್ದ ಚಾಕ್ಲೆಟ್ ರಾಶಿ ಇದು ಎಂಬ ಆರೋಪವಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸೂಕ್ತ ಸಾಕ್ಷ್ಯಾಧಾರ ದೊರೆತರೆ ಕ್ರಮ ಜರುಗಿಸುತ್ತೇವೆ' ಎಂದು ನಗರಸಭೆ ಪರಿಸರ ವಿಭಾಗದ ಎಂಜಿನಿಯರ್ ನಾರಾಯಣ ನಾಯಕ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT