ಭಾನುವಾರ, ಫೆಬ್ರವರಿ 28, 2021
20 °C
11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ನ್ಯಾಯಾಧೀಶ ಸಿ.ರಾಜಶೇಖರ

‘ಮತದಾನ ಕರ್ತವ್ಯ ಪಾಲನೆ ಮುಖ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಸಂವಿಧಾನ ನೀಡಿದ ಮಾನವ ಹಕ್ಕುಗಳಿಗೆ ಚ್ಯುತಿ ಉಂಟಾದಾಗ ಪ್ರತಿಭಟಿಸುವ ಮಾದರಿಯಲ್ಲೇ ಮತದಾನದಂತಹ ಕರ್ತವ್ಯಗಳನ್ನೂ ನಿರ್ವಹಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ರಾಜಶೇಖರ ಹೇಳಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಮಾತನಾಡಿ, ‘ಮತದಾನ ಮಾಡದೇ ಇರುವ ಪಾಪದ ಕೆಲಸ ಮತ್ತೊಂದಿಲ್ಲ. ಯಾವುದೇ ಚುನಾವಣೆಯಲ್ಲಾಗಲೀ ಮತದಾನ ಮಾಡುವುದು ನಮ್ಮ ಪರಮ ಕರ್ತವ್ಯವಾಗಿದೆ’ ಎಂದು ಕಿವಿಮಾತು ಹೇಳಿದರು.

ಇದೇವೇಳೆ, ಮತದಾನ ಮಹತ್ವದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಸರ್ಕಾರಿ ಕಲಾ ಮತ್ತು ವಿಜ್ಞಾನ ಪಿ.ಯು ಕಾಲೇಜು ವಿದ್ಯಾರ್ಥಿಗಳಲ್ಲಿ 18 ವರ್ಷ ಪೂರೈಸಿದವರಿಗೆ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಚುನಾವಣೆಗಳ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ಬೂತ್ ಮಟ್ಟದ ಅಧಿಕಾರಿಗಳಾದ ಉಮೇಶ ಎಸ್.ಗುನಗಿ, ವೈಶಾಲಿ ಬಿ.ನಾಯ್ಕ, ವಿಜಯಾ ಭಟ್ಟ, ರಾಮಚಂದ್ರ ಜಿ.ಭಟ್ಟ ಅವರನ್ನು ಸನ್ಮಾನಿಸಲಾಯಿತು.

ಬಾಡ ನ್ಯೂ ಪ್ರೌಢಶಾಲೆ ವಿದ್ಯಾರ್ಥಿಗಳು ‘ಯಂತ್ರ, ತಂತ್ರ ಮತ್ತು ಸತ್ಯ’‌ ಎಂಬ ಮತದಾನ ಯಂತ್ರ ಹಾಗೂ ಅದರ ಉಪಯೋಗ, ದುರುಪಯೋಗದ ಬಗ್ಗೆ ನಾಟಕ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಹಶೀಲ್ದಾರ್ ರಾಮಚಂದ್ರ ವಿ.ಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಎನ್.ಜಿ.ನಾಯ್ಕ ಇದ್ದರು.

ಬಹುಮಾನ ವಿಜೇತರು: ವಿವಿಧ ಸ್ಪರ್ಧೆಗಳಲ್ಲಿ ಅನುಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರೌಢಶಾಲೆ ವಿಭಾಗದ ಕನ್ನಡ ಪ್ರಬಂಧ ಸ್ಪರ್ಧೆ: ಈರಣ್ಣ ನರೇಗಲ್, ಪಾರ್ವತಿ ತಿಮ್ಮಪ್ಪಗೌಡ, ಮೇಘನಾ ಮಾದೇವ ನಾಯ್ಕ. ಇಂಗ್ಲಿಷ್ ಪ್ರಬಂಧ: ಆದಿತ್ಯ ಎ.ಜಿ, ಭಾವನಾ ಗಜಾನನ ಹೆಗಡೆ, ಸಿಂಚನಾ ಡಿ.ನಾಯ್ಕ.

ರಸಪ್ರಶ್ನೆ ಸ್ಪರ್ಧೆ: ಅನನ್ಯಾ ಯು.ನಾಯ್ಕ, ಪವಿತ್ರಾ ಗಣಪತಿ ನಾಯ್ಕ, ಮೇಘನಾ.ಎಸ್.ಹೆಗಡೆ, ಸುಗಂಧಾ ಸುರೇಶ ಹಣಬರ.

ಕೋಲಾಜ್: ಲಾವಣ್ಯಾ ಮಾಸ್ತಪ್ಪ ನಾಯ್ಕ, ನಾಗರತ್ನಾ ಪ.ದೊಡ್ಮನಿ, ಅಕ್ಷತಾ.ಶಾನಭಾಗ.

ಭಿತ್ತಿಚಿತ್ರ: ಖುಷಿ ದಿಲೀಪ ಪಾಟೀಲ್, ನೇಹಾ ಮೇಸ್ತ, ಧನುಷಿ ಎಂ.ಭಾಗವತ್.

ಪದವಿ ಪೂರ್ವ ಕಾಲೇಜು ವಿಭಾಗ
ಕನ್ನಡ ಪ್ರಬಂಧ:
ನಂದಿನಿ ಸಾಂವಂತ, ಸುವರ್ಣಾ ಎನ್.ಶೇಟ್, ಅನುಷಾ.ಜಿ.ಪಟಗಾರ.

ಇಂಗ್ಲಿಷ್ ಪ್ರಬಂಧ: ಸಾಕ್ಷಿ ಡಿ.ಪರಬ, ಸುಶ್ಮಿತಾ ಗೌಡರ, ಸಯೋನಾ ಗೋನ್ಸಾಲೀಸ್.

ರಸಪ್ರಶ್ನೆ: ಕಾವ್ಯಾ ರಾಮ ಗೌಡ ಹಾಗೂ ಕೆ.ಎಂ.ಪವಿತ್ರಾ, ಅಕ್ಷಯ ಶೇಟ್ ಹಾಗೂ ಅಮನ್ ಖಾನ್, ಅಕ್ಷಯ ಪಿ.ನಾಯ್ಕ ಹಾಗೂ ಹರ್ಷ ಟೋಮರ.

ಕೋಲಾಜ್: ಪ್ರಥಮ ವೈಷ್ಣವಿ ವೆರ್ಣೇಕರ್, ಕೆ.ಎಂ.ಪವಿತ್ರಾ, ಎಸ್.ಕೆ.ಪೂರ್ವಿ.

ಭಿತ್ತಿಚಿತ್ರ: ಗಣೇಶ ಗೊಂಡ, ವೈಷ್ಣವಿ ವೆರ್ಣೇಕರ್, ಅಕ್ಷತಾ ನಾಯ್ಕ.

ಪದವಿ ವಿಭಾಗ
ಕನ್ನಡ ಪ್ರಬಂಧ:
ಶಿಲ್ಪಾ ಶೆಟ್ಟಿ, ಲತಾ ಕೆ.ಆರ್, ಜ್ಯೋತಿ ಬಂಡಿವಡ್ಡರ.

ಇಂಗ್ಲಿಷ್ ಪ್ರಬಂಧ: ಮಂಥನ್ ನಾಯ್ಕ, ವಿಶ್ವನಾಥ ನಾಯಕ, ರಮೇಶ ಲಮಾಣಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು