ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರೊಂದಿಗೆ ಪೊಲೀಸರ ಸೌಹಾರ್ದ ಸಭೆ

ಅಲೆ ತಡೆಗೋಡೆ ನಿರ್ಮಾಣಕ್ಕೆ ವಿರೋಧ: ಶಾಂತಿಯುತವಾಗಿರಲು ಮನವಿ
Last Updated 17 ಡಿಸೆಂಬರ್ 2019, 14:28 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಅಂಗವಾಗಿ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಯು ಡಿ.18ರಂದು ಆರಂಭವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂಚಾರ ಪೊಲೀಸ್ ಠಾಣೆಯಲ್ಲಿ ಡಿವೈಎಸ್‌ಪಿ ಶಂಕರ ಮಾರಿಹಾಳ ನೇತೃತ್ವದಲ್ಲಿ ಮಂಗಳವಾರ ಮೀನುಗಾರರೊಂದಿಗೆ ಸೌಹಾರ್ದತಾ ಸಭೆ ಹಮ್ಮಿಕೊಳ್ಳಲಾಯಿತು.

‘ಸಾಗರಮಾಲಾ’ ಯೋಜನೆಯಭಾಗವಾದ ಈ ಕಾಮಗಾರಿಗೆಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಮೀನುಗಾರರ ಮನವೊಲಿಕೆ ಮಾಡಲುಪೊಲೀಸರು ಸಭೆ ಹಮ್ಮಿಕೊಂಡಿದ್ದರು.

ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ‘ನೌಕಾನೆಲೆ ಯೋಜನೆಗೆ ಭೂಮಿ ತ್ಯಾಗ ಮಾಡಿದವರು ಈಗ ಟ್ಯಾಗೋರ್ ಕಡಲತೀರವನ್ನೇ ಅವಲಂಬಿಸಿದ್ದಾರೆ. ₹ 40ಕೋಟಿ ಆದಾಯದ ಆಸೆಗೆ ₹ 4 ಸಾವಿರ ಕೋಟಿ ಆದಾಯ ತರುವ ಮೀನುಗಾರಿಕಾ ಚಟುವಟಿಕೆಯ ಮೇಲೆ ಹೊಡೆತ ನೀಡುವುದು ಸರಿಯಲ್ಲ‌’ ಎಂದರು.

‘ತರಾತುರಿ ಬೇಡ’: ‘ಈ ಯೋಜನೆಯ ಬಗ್ಗೆ ಮೀನುಗಾರಿಕಾ ಸಚಿವರು, ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಹಮ್ಮಿಕೊಳ್ಳಬೇಕು. ನಂತರವೇ ಕಾಮಗಾರಿ ನಡೆಸುವ ಬಗ್ಗೆ ನಿರ್ಧಾರವಾಗಲಿ. ಅಲ್ಲಿಯವರೆಗೂ ಕೆಲಸ ಮಾಡಲು ತರಾತುರಿ ಬೇಡ’ ಎಂದು ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಆಗ್ರಹಿಸಿದರು.

ಮೀನುಗಾರಿಕಾ ಧುರೀಣ ಕೆ.ಟಿ.ತಾಂಡೇಲ್, ‘ಅಲೆ ತಡೆಗೋಡೆ ನಿರ್ಮಾಣದಿಂದ ಕಡಲತೀರಕ್ಕೆ ಹಾನಿಯಾಗಲಿದೆ.ಯೋಜನೆಗೆ ನಮ್ಮ ಭಾರಿ ವಿರೋಧವಿದೆ’ ಎಂದು ಸ್ಪಷ್ಟಪಡಿಸಿದರು.

ಮುಖಂಡ ರಾಜು ತಾಂಡೇಲ್ ಮಾತನಾಡಿ, ‘ಸಾರ್ವಜನಿಕರ ವಿರೋಧವಿದ್ದೂಬಂದರು ವಿಸ್ತರಣೆಮಾಡುವುದುಸರಿಯಲ್ಲ. ಸರ್ಕಾರ ಯೋಜನೆಯನ್ನು ಹಿಂಪಡೆಯದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಪ್ರಸಾದ ಕಾರವಾರಕರ್,ರಮಾಕಾಂತ ಗಾಂವಕರ್ ಮಾತನಾಡಿದರು.

ಡಿವೈಎಸ್‌ಪಿಶಂಕರ ಮಾರಿಹಾಳ ಮಾತನಾಡಿ, ‘ಅಲೆ ತಡೆಗೋಡೆ ಕಾಮಗಾರಿ ಆರಂಭಿಸಲು ಬಂದರುಇಲಾಖೆ ಸಿದ್ಧತೆ ಮಾಡಿಕೊಂಡಿದೆ.ರಕ್ಷಣೆ ನೀಡುವಂತೆ ತಿಳಿಸಿದೆ. ಮೀನುಗಾರರು ಪ್ರತಿಭಟಿಸದೇಶಾಂತವಾಗಿರಬೇಕು’ ಎಂದು ಮನವಿ ಮಾಡಿದರು.

ಸಿಪಿಐ ಸಂತೋಷ್ ಶೆಟ್ಟಿ ಮಾತನಾಡಿ, ಎಲ್ಲರೂ ಕಾನುನು ಪಾಲಿಸಬೇಕಿದ್ದು, ಅಹಿತಕರ ಘಟನೆಗೆ ಆಸ್ಪದ ಕೊಡಬಾರದು ಎಂದರು.

ಎಸ್‌ಐಗಳಾದ ಸಂತೋಷಕುಮಾರ್.ಎಂ., ಎನ್.ಡಿ.ಜಕ್ಕಣ್ಣನವರ್ ಇದ್ದರು. ನಗರಸಭೆ ಸದಸ್ಯರಾದ ರೇಷ್ಮಾ ಮಾಳ್ಸೇಕರ್, ರಾಜೇಶ ಮಾಜಾಳಿಕರ್, ಮೀನುಗಾರ ಪ್ರಮುಖರಾದ ಚೇತನ ಹರಿಕಂತ್ರ ಹಾಗೂ ಹಲವು ಮೀನುಗಾರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT