ಗುರುವಾರ , ಆಗಸ್ಟ್ 18, 2022
25 °C
ವರದಿ ಫಲಶ್ರುತಿ

ದಾಂಡೇಲಿ: ರಸ್ತೆಯ ಗುಂಡಿಗಳಿಗೆ ಡಾಂಬರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಂಡೇಲಿ: ನಗರದ ಜೆ.ಎನ್ ರಸ್ತೆಯ ಗುಂಡಿಗಳಿಗೆ ಡಾಂಬರು ಹಾಕುವ ಕೆಲಸ ಸೋಮವಾರ ಪ್ರಾರಂಭವಾಗಿದೆ. ಗುಂಡಿಬಿದ್ದ ರಸ್ತೆಯನ್ನು ಸರಿಪಡಿಸುವಂತೆ ಸಾರ್ವಜನಿಕರು ಹಲವು ಬಾರಿ ನಗರಾಡಳಿತವನ್ನು ಒತ್ತಾಯಿಸಿದ್ದರು. ಅದರಂತೆ, ಮೇರೆಗೆ ಒಳಚರಂಡಿ ಕಾಮಗಾರಿ ನಿರ್ವಹಣೆಯ ಗುತ್ತಿಗೆದಾರರು ರಸ್ತೆ ದುರಸ್ತಿ ಕಾಮಗಾರಿಯನ್ನು ಆರಂಭಿಸಿದ್ದಾರೆ.

ರಸ್ತೆಯ ದುರವಸ್ಥೆಯ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮೇ 24ರಂದು, ‘ಹೊಂಡಮಯ ರಸ್ತೆ: ಸಂಚಾರಕ್ಕೆ ಸವಾಲು’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು.

ಮಳೆಗಾಲ ಆರಂಭಕ್ಕೂ ಮುನ್ನ ಗುಣಮಟ್ಟದ ರಸ್ತೆ ನಿರೀಕ್ಷೆಯಲ್ಲಿದ್ದ ಜನರಿಗೆ ಗುಂಡಿಗಳಿಗೆ ತೇಪೆ ಹಚ್ಚುವ ಕೆಲಸದಿಂದ ಬೇಸರ ಉಂಟಾಗಿದೆ. ಮಳೆಗಾಲ ನಂತರ ಅದೇ ಸ್ಥಿತಿಯ ಉಂಟಾಗುತ್ತದೆ. ಅದರ ಬದಲು ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಜೆ.ಎನ್ ರಸ್ತೆಯಲ್ಲಿ ಹೊಂಡಗಳನ್ನು ತಪ್ಪಿಸಿಕೊಂಡು ವಾಹನ ಚಲಿಸುವುದೇ ಸವಾಲಿನ ಕೆಲಸವಾಗಿದೆ. ದಾಂಡೇಲಿ ಜೆ.ಎನ್ ರಸ್ತೆ ಸ್ಥಿತಿಯನ್ನು, ಸಾಮಾಜಿಕ ಜಾಲತಾಣಗಳಲ್ಲಿ ‘ಹೊಂಡಗಳಲ್ಲಿ ರಸ್ತೆ ಹುಡುಕಿಕೊಡಿ’ ಎಂದು ‘ಟ್ರೋಲ್’ ಕೂಡ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು