ಶನಿವಾರ, ಜುಲೈ 31, 2021
28 °C

ಅಂಕೋಲ | ಮತ್ತೆ ಎದುರಾಯ್ತು ಕಡಲ್ಕೊರೆತದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅರಬ್ಬಿ ಸಮುದ್ರದಲ್ಲಿ ಎರಡು ದಿನಗಳಿಂದ ಅಬ್ಬರಿಸುತ್ತಿರುವ ‘ನಿಸರ್ಗ’ ಚಂಡಮಾರುತದ ಪರಿಣಾಮ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಇದರಿಂದ ಕಡಲತೀರದ ನಿವಾಸಿಗಳಿಗೆ ಆತಂಕ ಮೂಡಿದೆ.

ಕಾರವಾರದ ಮಾಜಾಳಿ, ದೇವಬಾಗ, ಅಂಕೋಲಾ ತಾಲ್ಲೂಕಿನ ಹಾರವಾಡ, ಕೇಣಿ, ಭಟ್ಕಳ ತಾಲ್ಲೂಕಿನ ಹೆಬಳೆ, ಗೊರಟೆ, ಹೊನ್ನಾವರ ತಾಲ್ಲೂಕಿನ ಹೆಗಡೆಹಿತ್ಲು, ತೊಪ್ಪಲಕೇರಿ, ಕರ್ಕಿಕೋಡಿ, ಪಾವಿನಕುರ್ವಾ ಭಾಗದಲ್ಲಿ ಕೆಲವು ವರ್ಷಗಳಿಂದ ಕಲಡ್ಕೊರೆತ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಮುಂಗಾರು ಆರಂಭಕ್ಕೂ ಮೊದಲೇ ಚಂಡಮಾರುತದ ಕಾರಣದಿಂದ ಅಲೆಗಳು ದೈತ್ಯಾಕಾರ ತಾಳಿ ಈ ಭಾಗದ ಕಡಲತೀರವನ್ನು ಆವರಿಸಿಕೊಳ್ಳುತ್ತಿವೆ. ಮಳೆಗಾಲ ಶುರುವಾದರೆ ಕಡಲ್ಕೊರೆತದ ಸಮಸ್ಯೆ ಮತ್ತೆ ಕಾಣಿಸಿಕೊಳ್ಳಬಹುದು ಎಂಬ ಆತಂಕ ಇಲ್ಲಿನ ನಿವಾಸಿಗಳಾದ್ದಾಗಿದೆ.

ಜಿಲ್ಲೆಯ ಕರಾವಳಿಯಲ್ಲಿ ಎರಡು ದಿನಗಳಿಂದ ಅಬ್ಬರಿಸಿದ್ದ ಗಾಳಿ ಮಳೆ, ಬುಧವಾರ ಮಧ್ಯಾಹ್ನದ ನಂತರ ಶಾಂತವಾಯಿತು. ವಿವಿಧ ತಾಲ್ಲೂಕುಗಳಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ.

ಮಳೆ ಪ್ರಮಾಣ (ತಾಲ್ಲೂಕುವಾರು): ಕಾರವಾರದಲ್ಲಿ ಬುಧವಾರ ಬೆಳಿಗ್ಗೆ 8ರವರೆಗೆ ಅತಿ ಹೆಚ್ಚು 15.4 ಸೆಂಟಿಮೀಟರ್ ಮಳೆಯಾಗಿದೆ. ಉಳಿದಂತೆ ಹೊನ್ನಾವರದಲ್ಲಿ 8.3, ಕುಮಟಾದಲ್ಲಿ 5.4, ಅಂಕೋಲಾದಲ್ಲಿ 5.3, ಯಲ್ಲಾಪುರದಲ್ಲಿ 2.7, ಜೊಯಿಡಾದಲ್ಲಿ 2.6, ಶಿರಸಿಯಲ್ಲಿ 2.4, ಭಟ್ಕಳದಲ್ಲಿ 2, ಹಳಿಯಾಳದಲ್ಲಿ 1.9 ಸೆಂಟಿಮೀಟರ್‌ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು