ಶನಿವಾರ, ಸೆಪ್ಟೆಂಬರ್ 21, 2019
25 °C

ಕುಂಬಾರವಾಡಾ: ಶಿವಾಜಿ ಜಯಂತಿ ಆಚರಣೆ

Published:
Updated:
Prajavani

ಜೊಯಿಡಾ: ತಾಲ್ಲೂಕಿನ ಕುಂಬಾರವಾಡಾದಲ್ಲಿ ಮಂಗಳವಾರ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕುದುರೆ ಮೇಲೆ ಕುಳಿತಿರುವ ಮಾದರಿಯ ಶಿವಾಜಿ ಮಹಾರಾಜರ ಪುತ್ಥಳಿಗೆ ಪ್ರಮುಖರು ಮಾಲಾರ್ಪಣೆ ಮಾಡಿದರು. ನಂತರ ಕುಂಬಾರವಾಡಾ ಹಾಗೂ ನೆರೆಯ ಗ್ರಾಮಗಳ ಸಾರ್ವಜನಿಕರು ಶ್ರೀ ಕ್ಷೇತ್ರಪಾಲ ದೇವಸ್ಥಾನದವರೆಗೆ, ಅಲ್ಲಿಂದ ಮಹಾಸತಿ ಗುಡಿಯವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಂಡರು. ಸಾರ್ವಜನಿಕರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಪುರುಷೋತ್ತಮ ಕಾಮತ್, ರತ್ನಾಕರ ದೇಸಾಯಿ, ಪ್ರವೀಣ ನಾಯ್ಕ, ಚಂದ್ರಕಾಂತ ದೇಸಾಯಿ, ರಂಜಿತ್ ದೇಸಾಯಿ ಹಾಗೂ ಗ್ರಾಮಸ್ಥರು ಇದ್ದರು.

Post Comments (+)