ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲನ್ನಾದರೂ ಸಹಿಸುತ್ತೇವೆ, ತೇಜೋವಧೆ ಪ್ರಯತ್ನ ಸಹಿಸಲಾಗದು: ಶಿವರಾಮ ಹೆಬ್ಬಾರ

Last Updated 6 ಮಾರ್ಚ್ 2021, 7:51 IST
ಅಕ್ಷರ ಗಾತ್ರ

ಶಿರಸಿ: ಸಾರ್ವಜನಿಕ ಜೀವನದಲ್ಲಿರುವ ನಾವು ಸೋಲನ್ನಾದರೂ ಸಹಿಸಿಕೊಳ್ಳುತ್ತೇವೆ. ಆದರೆ, ವೈಯಕ್ತಿಕ ತೇಜೋವಧೆ ಸಹಿಸಲಾಗದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದಲ್ಲಿ ಮಾಧ್ಯಮಗಳ ಜತೆ ಶನಿವಾರ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ರಚನೆಗೆ ಬಲ ನೀಡಿದ ಸಚಿವರನ್ನು ಗುರಿಯಾಗಿಸಿ ಅವರನ್ನೇ ಬೆದರಿಸುವ ಪ್ರಯತ್ನ ನಡೆದಿದೆ. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಯಿತು’ ಎಂದರು.
‘ರಾಜಕೀಯ ಜೀವನದ ಹೊರತಾಗಿ ನಮಗೂ ವೈಯಕ್ತಿಕ ಜೀವನವಿದೆ. ನಮಗೂ ಕುಟುಂಬ, ಮಕ್ಕಳಿದ್ದಾರೆ. ಯಾವ ವ್ಯಕ್ತಿಯ ವೈಯಕ್ತಿಕ ತೇಜೋವಧೆ, ಗೌರವ ಹಾಳುಮಾಡುವ ಕೆಲಸ ಒಳ್ಳೆಯ ಬೆಳವಣಿಗೆಯಲ್ಲ. ಇದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ’ ಎಂದರು.

‘ರಮೇಶ ಜಾರಕಿಹೋಳಿ ಇಂದಲ್ಲ ನಾಳೆ ತಪ್ಪಿತಸ್ಥರಲ್ಲ ಎಂದು ಸಾಬೀತಾಗಬಹುದು. ಆದರೆ, ಹಾಳುಮಾಡಿದ ಅವರ ಗೌರವ ತಂದುಕೊಡಲು ಸಾಧ್ಯವೆ? ಇದೇ ಸ್ಥಿತಿ ಉಳಿದ ನಾಯಕರಿಗೂ ಎದುರಾಗಬಹುದು. ಹೀಗಾಗಿ, ಮುನ್ನೆಚ್ಚರಿಕೆ ನಮಗೂ ಅನಿವಾರ್ಯವಾಗಿದೆ’ ಎಂದರು.

‘ರಾಜಕೀಯ ಷಡ್ಯಂತ್ರವಿಲ್ಲದೆ ಈ ರೀತಿಯ ಪ್ರಯತ್ನ ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುವ ವ್ಯವಹಾರ ನಡೆಯುತ್ತಿದೆ. ಆ ಬಗ್ಗೆ ಸರ್ಕಾರ ಕಠಿಣ ಕ್ರಮ ಜರುಗಿಸಬೇಕಿದೆ’ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT