ಕಾರವಾರ:ಶಾಲೆಗಳಲ್ಲಿ ಮಾಡಿದ ಬಿಸಿಯೂಟ ರುಚಿಯಾಗಿದೆಯೇ, ಅದರಲ್ಲಿ ಅಗತ್ಯವಿದ್ದಷ್ಟು ಬೇಳೆ ಕಾಳು, ತರಕಾರಿ ಬಳಸಲಾಗಿದೆಯೇ, ಎಷ್ಟು ವಿದ್ಯಾರ್ಥಿಗಳು ಊಟ ಮಾಡಿದ್ದಾರೆ, ಅವರ ಅನಿಸಿಕೆಯೇನು... ಮುಂತಾದ ಮಾಹಿತಿಗಳನ್ನು ಪಾರದರ್ಶಕವಾಗಿ ದಾಖಲಿಸಿಕೊಳ್ಳಲುಉತ್ತರ ಕನ್ನಡ ಜಿಲ್ಲಾ ಪಂಚಾಯ್ತಿಯು ರಾಜ್ಯದಲ್ಲೇ ಮೊದಲ ಬಾರಿಗೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರದ ಕಾರವಾರದ ಸಿಬ್ಬಂದಿ ಅಭಿವೃದ್ಧಿ ಪಡಿಸಿದ ಈ ತಂತ್ರಾಂಶದ ಪ್ರಾಯೋಗಿಕ ಬಳಕೆಯು ಕೆಲವು ದಿನಗಳ ಹಿಂದೆ ಆರಂಭವಾಗಿದೆ. ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳಎಲ್ಲ 2,291 ಶಾಲೆಗಳ ಮಾಹಿತಿಯೂ ಇದರಲ್ಲಿ ದಾಖಲಾಗುತ್ತಿದೆ. ಇವುಗಳನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ವೆಬ್‌ಸೈಟ್ ಮೂಲಕ ಸಾರ್ವಜನಿಕರೂ ನೋಡಬಹುದಾಗಿದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?

‘ಆಯಾ ಶಾಲೆಗಳ ಶಿಕ್ಷಕರನ್ನು ದಿನಕ್ಕೆ ಒಬ್ಬರಂತೆ ‘ಮಧ್ಯಾಹ್ನದ ಬಿಸಿಯೂಟದನೋಡಲ್ ಅಧಿಕಾರಿ’ ಎಂದು ನೇಮಿಸಲಾಗಿದೆ. ಅಡುಗೆ ಸಿಬ್ಬಂದಿಅಡುಗೆಗೆ ಬಳಸುವಅಕ್ಕಿಯೂ ಸೇರಿದಂತೆ ಎಲ್ಲ ಸಾಮಗ್ರಿಯ ಪ್ರಮಾಣವನ್ನು ಅವರು ದಾಖಲಿಸಿಕೊಳ್ಳುತ್ತಾರೆ. ಊಟದ ಗುಣಮಟ್ಟದ ಕುರಿತು ವಿದ್ಯಾರ್ಥಿಗಳೂಪ್ರತಿಕ್ರಿಯಿಸುತ್ತಾರೆ.ಬಳಿಕ ಆ ಮಾಹಿತಿಗಳನ್ನು ಅಕ್ಷರ ದಾಸೋಹ ಕಚೇರಿಯಲ್ಲಿರುವ ಡಾಟಾ ಆಪರೇಟರ್ ಮಧ್ಯಾಹ‌್ನದ ಒಳಗೆ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡುತ್ತಾರೆ. ಅದರಲ್ಲಿ ಆಹಾರ ಗುಣಮಟ್ಟದ ಮಾಹಿತಿ ಲಭಿಸುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದರು.

‘ಊಟದ ಗುಣಮಟ್ಟದ ಬಗ್ಗೆ ಉತ್ತಮ, ಸಾಧಾರಣ ಮತ್ತು ಕಳಪೆ ಎಂಬ ಮೂರು ಮಾನದಂಡಗಳನ್ನು ನೀಡಲಾಗಿದೆ. ತಮಗೆ ನೀಡಿದ ಪ್ರತಿಕ್ರಿಯೆಯ ಚೀಟಿಯಲ್ಲಿ (ಫೀಡ್‌ಬ್ಯಾಕ್ ಫಾರಂ) ಮಕ್ಕಳು ಗುರುತು ಮಾಡುತ್ತಾರೆ. ಒಂದುವೇಳೆ, ಆಹಾರ ಗುಣಮಟ್ಟವಿಲ್ಲ ಎಂದುಗೊತ್ತಾದರೆ ಕೂಡಲೇ ನಾವು ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ’ ಎಂದು ಅವರು ವಿವರಿಸಿದರು.

ದೈನಂದಿನ ಅಂಕಿ ಅಂಶ

ಇಷ್ಟುದಿನ ಶಾಲೆಗಳಲ್ಲಿ ಪ್ರತಿದಿನ ಬಿಸಿಯೂಟ ಸೇವಿಸಿದವರ ಸಂಖ್ಯೆ ಮತ್ತು ಅದರ ಗುಣಮಟ್ಟದ ಬಗ್ಗೆಆಯಾ ಶಾಲೆಗಳ ಶಿಕ್ಷಕರು, ಸಿಬ್ಬಂದಿಗೆಮಾತ್ರ ಮಾಹಿತಿ ಇರುತ್ತಿತ್ತು. ಜಿಲ್ಲಾ ಪಂಚಾಯ್ತಿ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರೆ ಮಾತ್ರ ತಿಳಿಸಲಾಗುತ್ತಿತ್ತು. ಇದರಿಂದ ಮಕ್ಕಳ ಆಹಾರದಶುಚಿ ರುಚಿಯಬಗ್ಗೆ ಪ್ರಾಮಾಣಿಕ ಉತ್ತರ ಸಿಗದಿರುವ ಸಾಧ್ಯತೆಗಳಿದ್ದವು. ಅಲ್ಲದೇ ದೈನಂದಿನ ಅಂಕಿ ಅಂಶಗಳೂ ತಕ್ಷಣಕ್ಕೆ ಸಿಗುತ್ತಿರಲಿಲ್ಲ. ಇದನ್ನು ತಂತ್ರಾಂಶದ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಏನೇನು ಮಾಹಿತಿ?

ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ‘ಅಕ್ಷರ ದಾಸೋಹ’ದ ಬಿಸಿಯೂಟ ಮಾಡಿದವರ ಸಂಖ್ಯೆ, ಅಡುಗೆಯ ಗುಣಮಟ್ಟ, ಬಳಸಿದ ಸಾಮಗ್ರಿ, ಶಾಲೆಗಳಲ್ಲಿ ಪಡಿತರ ಸಂಗ್ರಹದ ಪ್ರಮಾಣ,ಊಟದ ಬಗ್ಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳು ಈ ತಂತ್ರಾಂಶದಲ್ಲಿ ದಾಖಲಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.