ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಯಿಡಾ: ಪಠ್ಯ ಪುಸ್ತಕ ವಿತರಣೆ ಆರಂಭ

Last Updated 25 ಮೇ 2019, 14:13 IST
ಅಕ್ಷರ ಗಾತ್ರ

ಜೊಯಿಡಾ:ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆ ಕಾರ್ಯ ಆರಂಭವಾಗಿದೆ. ಶಾಲೆ ಆರಂಭವಾಗಲು ಕೆಲವೇ ದಿನಗಳಿದ್ದು, ಈ ಬಾರಿ ಮೊದಲೇ ಪುಸ್ತಕಗಳು ಸಿಗುತ್ತಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ತಾಲ್ಲೂಕಿನಲ್ಲಿ 125 ಕಿರಿಯ ಹಾಗೂ 37 ಹಿರಿಯ ಪ್ರಾಥಮಿಕ ಶಾಲೆಗಳಿವೆ. 17 ಪ್ರೌಢಶಾಲೆಗಳಿವೆ. ಕಳೆದ ವರ್ಷ ಶಾಲೆ ಆರಂಭವಾದರೂಪುಸ್ತಕಗಳು ಶಾಲೆಗಳಿಗೆ ಸರಬರಾಜು ಆಗಿರಲಿಲ್ಲ. ಈ ವರ್ಷ ಹಾಗಾಗದಂತೆ ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.

ತಾಲ್ಲೂಕಿಗೆ ಈಗಾಗಲೇಶೇ 90ರಷ್ಟು ಪಠ್ಯಪುಸ್ತಕಗಳುಶಿಕ್ಷಣ ಇಲಾಖೆಯಿಂದಈಗಾಗಲೇಪೂರೈಕೆಯಾಗಿವೆ. ಉಳಿದ ಶೇ 10ರಷ್ಟು ಇನ್ನು ನಾಲ್ಕು ದಿನಗಳಲ್ಲಿಬರಲಿವೆಎಂದು ಅಧಿಕಾರಿಗಳು ಹೇಳಿದ್ದಾರೆ. ಉಳವಿ, ಅಣಶಿ, ಕುಂಬಾರವಾಡ ಭಾಗದ ಶಾಲೆಗಳಿಗೆ ಈಗಾಗಲೆ ವಿತರಣೆ ಮಾಡಲಾಗಿದೆ. ಈತಿಂಗಳ ಕೊನೆಗೆ ಎಲ್ಲ ಶಾಲೆಗಳಿಗೂ ಪುಸ್ತಕಗಳ ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ನೋಡೆಲ್ ಅಧಿಕಾರಿ ಸುರೇಶ ಹೊಸಮನಿ ಮಾಹಿತಿ ನೀಡಿದ್ದಾರೆ.

ಬಹುತೇಕ ಎಲ್ಲಾ ವಿಷಯಗಳ ಪುಸ್ತಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿಜೋಡಿಸಿ ಇಡಲಾಗಿದೆ.ಅಲ್ಲಿಂದ ಎಲ್ಲಾ ಶಾಲೆಗಳಿಗೆ ಕಳುಹಿಸಲಾಗುತ್ತದೆ ಎಂದು ಅವರು ತಿಳಿಸಿದರು. ತಾಲ್ಲೂಕಿನ 30ಕ್ಕಿಂತ ಹೆಚ್ಚು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸರ್ಕಾರಿ ಶಿಕ್ಷಕರುಇಲ್ಲದ ಕಾರಣ ಪುಸ್ತಕಗಳ ವಿತರಣೆಗೆ ಸಮಸ್ಯೆಯಾಗುತ್ತಿದೆ ಎಂದು ಹೆಸರು ಹೇಳಲು ಬಯಸದ ಸಿಬ್ಬಂದಿಯೊಬ್ಬರು ಹೇಳಿದರು.

ಸಮವಸ್ತ್ರದ ನಿರೀಕ್ಷೆ:ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ ಉಚಿತ ಸಮವಸ್ತ್ರಗಳು ಇನ್ನೂ ಬಂದಿಲ್ಲ.ಮಕ್ಕಳ ಸಂಖ್ಯೆಗಳನ್ನು ಸರ್ಕಾರಕ್ಕೆ ಈಗಾಗಲೇ ಕಳುಹಿಸಲಾಗಿದೆ. ಶಾಲೆ ಆರಂಭವಾಗುವ ಮೋದಲೇ ಸಮವಸ್ತ್ರ ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT