ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಈ ತಿಂಗಳ ಕೊನೆಯಲ್ಲಿ ಮೂರನೇ ಸುತ್ತಿನ ಸಮೀಕ್ಷೆ

Last Updated 14 ಏಪ್ರಿಲ್ 2020, 12:39 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಜ್ವರ ಮತ್ತು ಅದರ ಗುಣಲಕ್ಷಣಗಳು ಇರುವವರ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲುಏಪ್ರಿಲ್ ಕೊನೆಯ ವಾರದಲ್ಲಿ ಮೂರನೇ ಸುತ್ತಿನ ‘ಜ್ವರ ಸಮೀಕ್ಷೆ’ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಏ.10ರಿಂದ ಏ.13ರವರೆಗೆ ಹಮ್ಮಿಕೊಳ್ಳಲಾದ ಎರಡನೇಸುತ್ತಿನ ಸಮೀಕ್ಷೆಯಲ್ಲಿ 1,059 ಜ್ವರ ಹಾಗೂ 357 ಜ್ವರದ ಲಕ್ಷಣಗಳಿರುವವರು ಪತ್ತೆಯಾಗಿದ್ದಾರೆ. ಯಾರಿಗೂ ಕೋವಿಡ್ 19 ಸೋಂಕಿನ ಲಕ್ಷಣಗಳಿಲ್ಲ ಎಂದು ಪ್ರಾಥಮಿಕ ಪರಿಶೀಲನೆಯಲ್ಲಿ ಗೊತ್ತಾಗಿದೆ. ಆದರೂ ಎಲ್ಲರ ಆರೋಗ್ಯದ ಮೇಲೆ ನಿತ್ಯವೂ ಹೆಚ್ಚಿನ ನಿಗಾ ಇಡಲಾಗುತ್ತದೆ ಎಂದು ಹೇಳಿದ್ದಾರೆ.

ಏ.1ರಿಂದ 6ರವರೆಗೆ ಹಮ್ಮಿಕೊಳ್ಳಲಾದ ಮೊದಲ ಸಮೀಕ್ಷೆಯಲ್ಲಿ 829 ಮಂದಿ ಜ್ವರ ಪೀಡಿತರು ಪತ್ತೆಯಾಗಿದ್ದರು. ಕೊರೊನಾ ವೈರಸ್ ಹರಡುತ್ತಿರುವ ಕಾರಣ ಎರಡನೇ ಸುತ್ತಿನ ಸಮೀಕ್ಷೆನಡೆಸಲು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು ಎಂದು ತಿಳಿಸಿದರು.

‘ಈ ಎರಡು ಸಮೀಕ್ಷೆಗಳು ಮತ್ತು ಮೂರು ವರ್ಷಗಳ ಅಂಕಿ ಅಂಶಗಳನ್ನುಪರಾಮರ್ಶೆ ಮಾಡಿದಾಗ ಜಿಲ್ಲೆಯಲ್ಲಿ ಜ್ವರ ಮತ್ತು ಅದರ ಲಕ್ಷಣಗಳಿರುವ ಆರೋಗ್ಯ ಸಮಸ್ಯೆಗಳಲ್ಲಿ ಗಣನೀಯವಾದ ಇಳಿಕೆಯಾಗಿದೆ. ಇದಕ್ಕೆ 21 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಯಾರೂ ಹೊರಗೆ ಸಂಚರಿಸದೇ ಇದ್ದುದೂ ಕಾರಣವಿರಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಗೋವಾದಲ್ಲಿ ಮೀನುಗಾರರ ಭೇಟಿ:ಗೋವಾದ ಬೇತುಲ್ ಮೀನುಗಾರಿಕಾ ಜೆಟ್ಟಿಯಲ್ಲಿ ಕೆಲಸ ಮಾಡುವ ಉತ್ತರ ಕನ್ನಡದಕಾರ್ಮಿಕರನ್ನು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ನಾಗರಾಜು ಮಂಗಳವಾರ ಭೇಟಿ ಮಾಡಿ ಅಹವಾಲು ಆಲಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ ಅವರು, ‘ಸುಮಾರು 300 ಮಂದಿ ಮೀನುಗಾರರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೇವಲ ಶೇ 10ರಷ್ಟು ಮಂದಿ ಮಾತ್ರ ಮೀನುಗಾರಿಕೆ ಮುಗಿಸಿ ದಡಕ್ಕೆ ವಾಪಸಾಗಿದ್ದರು. ಉಳಿದವರು ಸಮುದ್ರದಲ್ಲೇ ಇದ್ದರು’ ಎಂದು ತಿಳಿಸಿದರು.

‘ಆರು ದೋಣಿಗಳ 20 ಮೀನುಗಾರ ಮುಖಂಡರ ಜೊತೆಚರ್ಚಿಸಿದಾಗ ಅವರಿಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಅವರ ಹಿತ ಕಾಯುವಂತೆ ಬೇತುಲ್‌ನ ಮೀನುಗಾರಿಕಾ ಇಲಾಖೆ ಅಧಿಕಾರಿಗಳ ಮನವಿ ಮಾಡಲಾಗಿದೆ’ ಎಂದೂ ಮಾಹಿತಿ ನೀಡಿದರು.

ದೇಶದಲ್ಲಿ ಲಾಕ್‌ಡೌನ್ ಆದ ಬಳಿಕ ಜಿಲ್ಲೆಯ ನೂರಾರು ಮೀನುಗಾರರು ಅಲ್ಲೇ ಉಳಿದುಕೊಂಡಿದ್ದಾರೆ. ಅವರ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT