ಮಂಗಳವಾರ, ಜುಲೈ 27, 2021
21 °C

ಕಾರವಾರ: ಕುಮಟಾ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಕರಣ: 36 ಮಂದಿಗೆ ಕೋವಿಡ್ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಸೋಮವಾರ 36 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅವರಲ್ಲಿ ಕುಮಟಾದ 14, ಭಟ್ಕಳದ ಏಳು, ಹಳಿಯಾಳದ ಆರು, ಹೊನ್ನಾವರದ ನಾಲ್ವರು, ಯಲ್ಲಾಪುರ ಮತ್ತು ಕಾರವಾರದ ತಲಾ ಇಬ್ಬರು, ಶಿರಸಿಯ ಒಬ್ಬರು ಸೇರಿದ್ದಾರೆ. 

ಸೋಂಕಿತರಲ್ಲಿ 21 ಪುರುಷರು, ಏಳು ಮಹಿಳೆಯರು ಹಾಗೂ ಎಂಟು ಮಕ್ಕಳಿದ್ದಾರೆ. ಆರು ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಭಟ್ಕಳದ ಮತ್ತು ಹೊನ್ನಾವರದ ತಲಾ ಒಬ್ಬರು ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಹಳಿಯಾಳದ ಒಬ್ಬರು, ಹೊನ್ನಾವರ ಮತ್ತು ಕಾರವಾರದ ತಲಾ ಇಬ್ಬರು ಹೊರ ರಾಜ್ಯ ಪ್ರವಾಸ ಮಾಡಿ ವಾಪಸ್ ಬಂದವರಾಗಿದ್ದಾರೆ. 

ಭಟ್ಕಳದ ಇಬ್ಬರು, ಕುಮಟಾದ ಎಲ್ಲ 14, ಹೊನ್ನಾವರದ ಒಬ್ಬರು ಈಗಾಗಲೇ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಕುಮಟಾದ ಒಬ್ಬರಿಗೆ ಜ್ವರದ ಲಕ್ಷಣಗಳಿದ್ದು (ಐ.ಎಲ್.ಐ), ಅವರ ಸೋಂಕಿನ ಮೂಲವನ್ನೂ ಹುಡುಕಲಾಗುತ್ತಿದೆ. ಭಟ್ಕಳದ ಸೋಂಕಿತರೊಬ್ಬರಿಗೆ ಉಸಿರಾಟದ ತೀವ್ರ (ಎಸ್.ಎ.ಆರ್.ಐ) ಸಮಸ್ಯೆಯಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

633 ಒಟ್ಟು ಸೋಂಕಿತರು

374 ಸಕ್ರಿಯ ಪ್ರಕರಣಗಳು

254 ಗುಣಮುಖರಾದವರು

5 ಮೃತರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು