ಸೋಮವಾರ, ಜುಲೈ 4, 2022
21 °C

ಕಾರವಾರ: ಎರಡು ಡಾಲ್ಫಿನ್‌ಗಳ ಕಳೇಬರ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ಅಲಿಗದ್ದಾ ಮತ್ತು ಮಾಜಾಳಿಯ ಕಡಲತೀರಗಳಲ್ಲಿ ಮಂಗಳವಾರ ಎರಡು ಡಾಲ್ಫಿನ್‌ಗಳ ಕಳೇಬರಗಳು ಪತ್ತೆಯಾಗಿವೆ.

ಸಣ್ಣ ಗಾತ್ರದ ‘ರಿಸ್ಸೊ’ ಡಾಲ್ಫಿನ್ ಮೃತದೇಹವು ಮಾಜಾಳಿಯಲ್ಲಿ ಕಂಡುಬಂದಿದ್ದು, ಸುಮಾರು ಒಂದು ಮೀಟರ್ ಉದ್ದವಿತ್ತು. ಈ ಭಾಗದಲ್ಲಿ ಅಪರೂಪದ ಪ್ರಭೇದ ಇದಾಗಿದೆ. ಮೀನುಗಾರಿಕಾ ದೋಣಿಯ ಬಲೆಗೆ ಸಿಕ್ಕಿ ಹೊರ ಬರಲಾರದೇ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ನಗರದ ಸಮೀಪದ ಅಲಿಗದ್ದಾದಲ್ಲಿ ‘ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್’ ಕಳೇಬರ ಕಾಣಿಸಿದೆ. ಇದು ಸುಮಾರು 2.5 ಮೀಟರ್ ಉದ್ದವಿತ್ತು. ಮೃತಪಟ್ಟು ಸುಮಾರು 15 ದಿನಗಳ ಮೇಲಾಗಿರುವ ಸಾಧ್ಯತೆಯಿದ್ದು, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಹಾಗಾಗಿ ಅದರ ಮರಣೋತ್ತರ ಪರೀಕ್ಷೆ ಮಾಡಲು ಸಾಧ್ಯವಾಗಲಿಲ್ಲ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು