ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ತೆರಿಗೆ ಕಡಿಮೆ ಮಾಡಲು ಮನವಿ

Last Updated 14 ಫೆಬ್ರುವರಿ 2020, 12:05 IST
ಅಕ್ಷರ ಗಾತ್ರ

ಕಾರವಾರ:‘ಗ್ರಾಮ ಪಂಚಾಯ್ತಿಯು ಮನೆ ತೆರಿಗೆಯನ್ನು ಏಕಾಏಕಿ ಏರಿಕೆ ಮಾಡಿದ್ದು, ಬಡವರಿಗೆ ಆರ್ಥಿಕ ಹೊರೆಯಾಗುತ್ತಿದೆ. ಆದ್ದರಿಂದ ಅದನ್ನು ಇಳಿಕೆ ಮಾಡಬೇಕು’ ಎಂದು ತಾಲ್ಲೂಕಿನ ಕಡವಾಡ ಗ್ರಾಮಸ್ಥರು ಜಿಲ್ಲಾ‍ಪಂಚಾಯ್ತಿಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

‘ಜಿಲ್ಲಾ ಪಚಾಯ್ತಿಗೆ ಭೇಟಿ ನೀಡಿದ ಗ್ರಾಮಸ್ಥರು, ಈ ಹಿಂದೆ ₹ 111 ಪಾವತಿಸಲಾಗುತ್ತಿತ್ತು. ಆದರೆ, ಈಗ ಏಕಾಏಕಿ ₹ 371ಕ್ಕೆ ಹಚ್ಚಿಸಲಾಗಿದೆ.ಕರ ಏರಿಕೆ ಮಾಡುವ ಈ ವಿಧಾನನ್ಯಾಯಯುತವಾಗಿಲ್ಲ. ಅಲ್ಪಸ್ವಲ್ಪ ಹೆಚ್ಚಳ ಮಾಡಿದರೆ ಹೇಗೋ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ, ₹ 250ಕ್ಕೂ ಅಧಿಕ ಹೆಚ್ಚಿಸಿದರೆ ಪಾವತಿಸಲು ಕಷ್ಟವಾಗುತ್ತದೆ’ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯ್ತಿಯ ಮುಖ್ಯ ಲೆಕ್ಕಾಧಿಕಾರಿ ವಿ.ಎಂ.ಹೆಗಡೆ, ‘ಗ್ರಾಮ ಪಂಚಾಯ್ತಿಯಲ್ಲಿ ಯಾವ ಮಾದರಿಯಲ್ಲಿ ಕರ ಸಂಗ್ರಹಿಸಲಾಗಿದೆ ಎಂದು ಮಾಹಿತಿ ಪಡೆದುಕೊಳ್ಳುತ್ತೇವೆ. ಒಂದುವೇಳೆ ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸತೀಶ ಸಿ.ನಾಯ್ಕ, ಆನಂದಿ ಹುಲಸ್ವಾರ್, ಮಾರುತಿ ಹುಲಸ್ವಾರ್, ನಿತೇಶ್ ಎನ್.ಗೌಡ, ಆಶಿಶ್, ದರ್ಶನ್ ನಾಗೇಕರ್,ಕೃಷ್ಣ ಬಿ.ಹುಲಸ್ವಾರ್, ಧಾರೇಶ್ವರ ಹುಲಸ್ವಾರ್ ಸೇರಿದಂತೆ ಹತ್ತಾರು ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT