ಸೋಮವಾರ, ಜುಲೈ 26, 2021
23 °C
ಇಬ್ಬರ ಮೇಲೆ ಪ್ರಕರಣ ದಾಖಲು

ಕ್ವಾರಂಟೈನ್ ನಿಯಮ ಉಲ್ಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರ ಮೇಲೆ ಇಲ್ಲಿನ ಮಾರುಕಟ್ಟೆ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

‘ಕೋವಿಡ್ 19 ಸೋಂಕಿತ (ಪಿ–5652) ವ್ಯಕ್ತಿಯು ಖತಾರ್ ದೇಶದಿಂದ ಬೆಂಗಳೂರಿಗೆ ಬಂದು, ಅಲ್ಲಿ ಸರ್ಕಾರಿ ಕ್ವಾರಂಟೈನ್ ಮುಗಿಸಿ, ನೇರವಾಗಿ ಕಾರವಾರದಲ್ಲಿರುವ ಮನೆಗೆ ಹೋಗದೇ, ಖಾಸಗಿ ಬಸ್‌ನಲ್ಲಿ ಹುಬ್ಬಳ್ಳಿಗೆ ಬಂದು, ಅಲ್ಲಿಂದ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಶಿರಸಿಗೆ ಬಂದಿದ್ದಾರೆ. ಈ ವ್ಯಕ್ತಿಯ ಸಂಬಂಧಿಯಾದ ಇಲ್ಲಿನ ಮುಸ್ಲಿಂಗಲ್ಲಿಯ ಮುಜಾಮಿಲ್ ನಜೀರ್ ಶೇಖ್, ಯಾವುದೇ ಸುರಕ್ಷತಾ ಸಾಧನ ಧರಿಸದೇ, ತಮ್ಮ ಮನೆಗೆ ಸೋಂಕಿತ ವ್ಯಕ್ತಿಯನ್ನು ಕರೆದೊಯ್ದಿದ್ದು, ನಂತರ ಅವರಿಬ್ಬರೂ ಶಿರಸಿಯಲ್ಲಿ ತಿರುಗಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ನಂತರ ಮೇ 31ರಂದು ಸೋಂಕಿತ ವ್ಯಕ್ತಿಯನ್ನು ಮುಜಾಮಿಲ್ ಕಾರಿನಲ್ಲಿ ಕಾರವಾರಕ್ಕೆ ಬಿಟ್ಟು ಬಂದಿದ್ದಾರೆ. ಈ ಮೂಲಕ ಸೋಂಕು ತಡೆಯುವಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು