ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ಓದು’ ಅಭಿಯಾನದ ವಿಠಲ ಭಂಡಾರಿ ನಿಧನ

Last Updated 7 ಮೇ 2021, 15:27 IST
ಅಕ್ಷರ ಗಾತ್ರ

ಕಾರವಾರ: ‘ಸಂವಿಧಾನ ಓದು’ ಅಭಿಯಾನದ ಮೂಲಕ ಪ್ರಸಿದ್ಧರಾಗಿದ್ದ ಸಿದ್ದಾಪುರದ ಎಂ.ಜಿ.ಸಿ ಮತ್ತು ಜಿ.ಎಚ್‌.ಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವಿಠಲ ಭಂಡಾರಿ (50) ಶುಕ್ರವಾರ ನಿಧನರಾದರು.

ಅವರು ಕೆಲವು ದಿನಗಳಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಪತ್ನಿ, ಹೋರಾಟಗಾರ್ತಿ ಯಮುನಾ ಗಾಂವ್ಕರ್, ಇಬ್ಬರು ಸಹೋದರಿಯರು ಇದ್ದಾರೆ.

ಪ್ರಸಿದ್ಧ ಸಾಹಿತಿ ಆರ್.ವಿ.ಭಂಡಾರಿ ಅವರ ಪುತ್ರರಾಗಿರುವ ವಿಠಲ ಭಂಡಾರಿ, ತಮ್ಮ ಹುಟ್ಟೂರು ಹೊನ್ನಾವರದ ಕೆರೆಕೋಣದ ‘ಸಹಯಾನ’, ‘ಚಿಂತನ ಉತ್ತರ ಕನ್ನಡ’ ಸೇರಿದಂತೆ ವಿವಿಧ ಸಂಘಟನೆಗಳು, ಅಭಿಯಾನಗಳಲ್ಲಿ ಸಕ್ರಿಯರಾಗಿದ್ದರು.

ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಜೊತೆ ಸೇರಿ ‘ಸಂವಿಧಾನ ಓದು’ ಅಭಿಯಾನವನ್ನು ರಾಜ್ಯದಾದ್ಯಂತ ಮುನ್ನಡೆಸಿದರು. ಈ ಬಗ್ಗೆ ನೆನಪಿಸಿಕೊಂಡ ನಾಗಮೋಹನ ದಾಸ್, ‘ನನ್ನನ್ನು ಪುಸ್ತಕ ಬರೆಯಬೇಕು ಎಂದು ಪ್ರೇರೇಪಿಸಿದವರೇ ವಿಠಲ ಅವರು. ಅದನ್ನು ಅವರ ಸಹಯಾನ ಸಂಸ್ಥೆ ಪ್ರಕಟಿಸಿತ್ತು. ಅಭಿಯಾನದ ಅಂಗವಾಗಿ ರಾಜ್ಯದಾದ್ಯಂತ ಜೊತೆಯಾಗಿ ಸಂಚರಿಸಿದೆವು. ಅವರ ನಿಧನ ರಾಜ್ಯದ ಪ್ರಜಾಪ್ರಭುತ್ವ ಚಳವಳಿಗೆ ದೊಡ್ಡ ನಷ್ಟ’ ಎಂದು ಕಂಬನಿ ಮಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT