ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಮನೆಯಲ್ಲೇ ಪ್ರತಿಭಟನೆ

Last Updated 21 ಏಪ್ರಿಲ್ 2020, 13:24 IST
ಅಕ್ಷರ ಗಾತ್ರ

ಕಾರವಾರ: ಅಗತ್ಯವೈಯಕ್ತಿಕ ರಕ್ಷಣಾ ಕಿಟ್‌ಗಳನ್ನು ಖರೀದಿಸಿ ಆರೋಗ್ಯ ತಪಾಸಣೆಗಳನ್ನು ಶೀಘ್ರವಾಗುವಂತೆ ನೋಡಿಕೊಳ್ಳಬೇಕು. ಆಶಾ, ಅಂಗನವಾಡಿ ಮುಂತಾದ ಆರೋಗ್ಯ ಕಾರ್ಯಕರ್ತರಿಗೆ ವಿಮೆ ಹಾಗೂ ಸುರಕ್ಷತಾ ಕ್ರಮ ಒದಗಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಮಂಗಳವಾರ ತಮ್ಮ ಮನೆಗಳಲ್ಲೇಪ್ರತಿಭಟನೆ ನಡೆಸಿದರು.

‘ಭಾಷಣ ಸಾಕು– ವೇತನ ಬೇಕು’, ‘ಉದ್ಯೋಗ ಉಳಿಸಿ– ಆರ್ಥಿಕತೆ ರಕ್ಷಿಸಿ’, ‘ಆಹಾರ ಒದಗಿಸಿ– ಬದುಕು ಉಳಿಸಿ’, ‘ಕೆಲಸದ ಅವಧಿ 8ರಿಂದ 12 ಗಂಟೆ ಹೆಚ್ಚಳ ಬೇಡ’ ಎಂದು ಇದೇವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಲಾಯಿತು.

ಕೊರೊನಾ ವೈರಸ್ ಹರಡದಂತೆ ಕೆಲಸಗಳಲ್ಲಿ ತೊಡಗಿರುವ ಅಂಗನವಾಡಿ, ಆಶಾ, ಆರೋಗ್ಯ ಸಹಾಯಕರಿಗೆ ಮತ್ತು ಅವರ
ಕುಟುಂಬದ ಎಲ್ಲರಿಗೂ ಆರೋಗ್ಯ ವಿಮೆ ಮಾಡಿಸಬೇಕು.ಈಗಿರುವ ಗೌರವಧನವನ್ನುದುಪ್ಪಟ್ಟು ಏರಿಸಿ, ಕೆಲಸಕಾಯಂ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಇದೇವೇಳೆ,ವಿವಿಧ 10 ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಯಿತು ಎಂದುಸಿ.ಐ.ಟಿ.ಯು ರಾಜ್ಯ ಘಟಕದ ಕಾರ್ಯದರ್ಶಿ ಯಮುನಾ ಗಾಂವ್ಕರ್,ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಒಕ್ಕೂಟದ ಅಧ್ಯಕ್ಷಶಾಂತಾರಾಮ ನಾಯಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT