ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ನಾಳೆಯಿಂದ

Last Updated 25 ಡಿಸೆಂಬರ್ 2019, 16:13 IST
ಅಕ್ಷರ ಗಾತ್ರ

ಶಿರಸಿ: ಜನರಲ್ಲಿ ಪರಿಸರ ಸೇವೆಯ ಪ್ರಜ್ಞೆ ಮೂಡಿಸುವ ಆಶಯದೊಂದಿಗೆ ಡಿ.27ರಿಂದ 29ರವರೆಗೆ ನಗರದ ರಾಘವೇಂದ್ರ ಮಠದಲ್ಲಿ ಯೂತ್ ಫಾರ್ ಸೇವಾ ಸಂಘಟನೆ ನೇತೃತ್ವದಲ್ಲಿ ಪರಿಸರ ಕಾರ್ಯಕರ್ತರ ರಾಜ್ಯಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಆಯೋಜಿಸಲಾಗಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲನಾ ಸಮಿತಿ ಸದಸ್ಯ ಆರ್.ವಾಸುದೇವ ಮಾಹಿತಿ ನೀಡಿದರು. ಯೂತ್ ಫಾರ್ ಸೇವಾ, ಶ್ರೀದುರ್ಗಾ ನರ್ಸರಿ ಮತ್ತು ಸಮಗ್ರ ವಿಕಾಸ ಟ್ರಸ್ಟ್, ಅರಣ್ಯ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಎನ್ಎಸ್ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸಂಘಟಿಸಿದ ಕಾರ್ಯಕ್ರಮಕ್ಕೆ, ಡಿ.27ರ ಬೆಳಿಗ್ಗೆ 10 ಗಂಟೆಗೆ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಚಾಲನೆ ನೀಡುವರು. ಮೊದಲ ದಿನ ಕಾರ್ಯಕ್ರಮದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಶಿಕ್ಷಣ, ಪಶ್ಚಿಮಘಟ್ಟ ವೈವಿಧ್ಯ, ಜೀವ ವೈವಿಧ್ಯ ದಾಖಲಾತಿ ಮಹತ್ವ, ವನ್ಯಜೀವಿ ಮತ್ತು ಪರಿಸರ, ಜಲ ಸಂರಕ್ಷಣೆಯಲ್ಲಿ ಮಳೆಕೊಯ್ಲು ಹಾಡು, ಮಳೆಕೊಯ್ಲು ಮಾದರಿ ಯಶಸ್ಸಿನ ಹಾದಿ ಕುರಿತು ಗೋಷ್ಠಿ ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.

ಡಿ.28ರಂದು ಬಕ್ಕಳ ವನದರ್ಶನ, ಪಕ್ಷಿ ವೀಕ್ಷಣೆ, ನರ್ಸರಿ ಮಾಡುವ ವಿಧಾನ, ಕಾನ್ಮನೆ ಹಾಗೂ ಚಾರೆ ಜಡ್ಡಿ ಭೇಟಿ, ಭೀಮನಗುಡ್ಡ ಚಾರಣ, ಕೊಳ್ಳದ ಮಾಹಿತಿ, ಜೇನುಕೃಷಿ ಮಾಹಿತಿ, ಹಾವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಡಿ.29ರಂದು ಹಸಿರು ಆಹಾರ, ಪಶುವೈದ್ಯದಲ್ಲಿ ಹಸಿರು ಔಷಧ, ಸರ್ಕಾರಿ ಯೋಜನೆಗಳು, ಔಷಧ ಸಸ್ಯಗಳ ಮಾರುಕಟ್ಟೆ, ಕಸಿ ಕಟ್ಟುವುದು, ಅಂಗಾಂಶ ಕೃಷಿ, ಬೀಜದುಂಡೆ ಮಾಡುವ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಡಿ.29ರಸಂಜೆ 4.30ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಪರಿಸರ ಬರಹಗಾರ ಶಿವಾನಂದ ಕಳವೆ, ಪರಿಸರ ಕಾರ್ಯಕರ್ತ ಅಖಿಲೇಶ ಚಿಪ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು. ಮನೆಮದ್ದು ತಯಾರಕಿ ಶೋಭಾ ಹೆಗಡೆ, ಪಶುವೈದ್ಯ ಡಾ.ಗಣೇಶ ಹೆಗಡೆ, ಪ್ರಮುಖರಾದ ಚಂದ್ರು ದೇವಾಡಿಗ, ಉಮಾಪತಿ ಭಟ್ಟ, ವೀರೇಶ ನರೇಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT