ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ರಾಷ್ಟ್ರಪತಿ ಮುರ್ಮುಗೆ ಮಾಳ್ಕೋಡ ಯುವತಿಯಿಂದ ಯಕ್ಷಗಾನ ಹಾಡಿನ ಸ್ವಾಗತ

Last Updated 24 ಜುಲೈ 2022, 12:55 IST
ಅಕ್ಷರ ಗಾತ್ರ

ಕಾರವಾರ: ದೇಶದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು, ಜುಲೈ 25ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಹೊನ್ನಾವರದ ಮಾಳ್ಕೋಡ ಗ್ರಾಮದ ಯುವತಿ ಚಿಂತನಾ ಹೆಗಡೆ, ಯಕ್ಷಗಾನ ಭಾಗವತಿಕೆಯ ಮೂಲಕ ಸ್ವಾಗತ ಕೋರಿದ್ದಾರೆ.

‘ಹೆಜ್ಜೆ ಇಟ್ಟಿಹಳು ದ್ರೌಪದಿ... ರಾಷ್ಟ್ರಪತಿಯ ಭವನದಲಿ... ಭಾರತ ಮಹಾಭಾರತವಾಗಲಿ... ಧರ್ಮರಾಯನ ನ್ಯಾಯಾಂಗ ಸಂವಿಧಾನವಿಹುದು... ಭೀಮ ಬಲದ ಸೇನಾಬಲವಿಹುದು..’ ಎಂದು ಯಕ್ಷಗಾನದ ಬಡಗುತಿಟ್ಟಿನ ಶೈಲಿಯಲ್ಲಿ ಗಾಯನ ಮಾಡಿದ್ದಾರೆ. ಉಡುಪಿಯ ಅರವಿಂದ ಚಿಪ್ಳೂಣ್ಕರ್ ಹಾಡನ್ನು ರಚಿಸಿದ್ದಾರೆ.

ಚಿಂತನಾ, ಮಾಳ್ಕೋಡಿನ ಯಕ್ಷಪಲ್ಲವಿ ಟ್ರಸ್ಟ್ ಮೇಳದಲ್ಲಿ ಐದು ವರ್ಷಗಳಿಂದ ಭಾಗವತಿಕೆ ಮಾಡುತ್ತಿದ್ದಾರೆ. ಈ ಹಾಡಿಗೆ ಅವರ ತಂದೆ ಉದಯ ಹೆಗಡೆ ಮಾಳ್ಕೋಡು ಮಾರ್ಗದರ್ಶನ ಮಾಡಿದ್ದಾರೆ. ಅವರ ಗಾಯನದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

–ಚಿಂತನಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT