ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಕಂಠ ಮುಡಿಗೆ ‘ಮಿಸ್ಟರ್ ಮೋಹನಶ್ರೀ–2018’

Last Updated 9 ಜನವರಿ 2018, 9:18 IST
ಅಕ್ಷರ ಗಾತ್ರ

ಕುಮಟಾ: ಜಿಲ್ಲಾ ದೇಹದಾರ್ಢ್ಯ ಮತ್ತು ಫಿಟ್‌ನೆಸ್ ಅಸೋಸಿಯೇಷನ್ ಹಾಗೂ ಕುಮಟಾ ಹೆಲ್ತ್ ಪಾಯಿಂಟ್ ಸಹಯೋಗದಲ್ಲಿ ಭಾನುವಾರ ಇಲ್ಲಿ ನಡೆದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಶಿರಸಿಯ ಫಿಟ್‌ನೆಸ್ ಪಾಯಿಂಟ್‌ನ ಮಣಿಕಂಠ ಮುರ್ಡೇಶ್ವರ ಅವರು, ‘ಮಿಸ್ಟರ್ ಮೋಹನಶ್ರೀ–2018’ ಪಟ್ಟವನ್ನು ಮುಡಿಗೇರಿಸಿಕೊಂಡರು.

ಕಾರವಾರದ ಸಮೀರ್ ಅಲ್ಟಿಮೇಟ್ ಜಿಮ್‌ನ ರಂಜನ್ ಸಿಂಗ್ ಹಾಗೂ ಶಿರಸಿಯ ಫಿಟ್‌ನೆಸ್ ಪಾಯಿಂಟ್‌ನ ಪ್ರಸಾದ್ ಮುರ್ಡೇಶ್ವರ ಅವರು ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಅಪ್‌ ಪ್ರಶಸ್ತಿ ಪಡೆದರು. ಕುಮಟಾ ಸಬ್‌ ಇನ್‌ಸ್ಪೆಕ್ಟರ್ ಇ.ಸಿ. ಸಂಪತ್ ವಿಜೇತರಿಗೆ ಬಹುಮಾನ ವಿತರಿಸಿದರು.

ನಗದು ಬಹುಮಾನ:‘ಮೋಹನಶ್ರೀ –2018’ ಪ್ರಶಸ್ತಿ ವಿಜತರಿಗೆ ₹ 7,777, ಸ್ಪರ್ಧೆಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆದವರಿಗೆ ಕ್ರಮವಾಗಿ ₹3 ಸಾವಿರ, ₹2 ಸಾವಿರ, ₹1 ಸಾವಿರ ಹಾಗೂ ₹ 750 ನೀಡಲಾಯಿತು. ಮೊದಲ ಹಾಗೂ ಎರಡನೇ ರನ್ನರ್ ಅಪ್ ಆದವರಿಗೆ ಕ್ರಮವಾಗಿ ₹ 4,444 ಮತ್ತು ₹ 3,333 ಹಾಗೂ ಬೆಸ್ಟ್ ಪೋಸರ್‌ಗೆ ₹1,111 ನಗದು ಹಾಗೂ ಫಲಕ ನೀಡಲಾಯಿತು.

ರಾಜ್ಯ ದೇಹದಾರ್ಢ್ಯ ಸಂಸ್ಥೆಯ ತೀರ್ಪುಗಾರರ ಮಂಡಳಿ ಕಾರ್ಯಾಧ್ಯಕ್ಷ ಜಿ.ಡಿ. ಭಟ್ಟ ಸ್ಪರ್ಧೆ ನಡೆಸಿಕೊಟ್ಟರು. ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಮಿಸ್ಟರ್ ಇಂಡಿಯಾ ಖ್ಯಾತಿಯ ದೇಹದಾರ್ಢ್ಯ ಪಟು ಪ್ರೀತಮ್ ಚೌಗಲೆ ದೇಹದಾರ್ಢ್ಯ ಪ್ರದರ್ಶನ ನೀಡಿದರು. ಪುನಿತ್ ಭಂಡಾರಿ ಅವರ ಮಣಿಪುರಿ ಸ್ಟಿಕ್ ಡ್ಯಾನ್ಸ್ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ‘ಜೈ ಕರ್ನಾಟಕ’ ಮಲ್ಲಕಂಭ ಆಕಾಡೆಮಿ ಸದ್ಯರ ಆಕರ್ಷಕ ಮಲ್ಲಕಂಬ ಪ್ರದರ್ಶನ ಗಮನ ಸೆಳೆಯಿತು.

ಕಾಂಗ್ರೆಸ್‌ ಮುಖಂಡ ರವಿಕುಮಾರ ಶೆಟ್ಟಿ, ಮಾಜಿ ಶಾಸಕ ದಿನಕರ ಶೆಟ್ಟಿ, ನಾಗರಾಜ ನಾಯಕ ತೊರ್ಕೆ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಸೂರಜ್ ನಾಯ್ಕ ಸೋನಿ, ಜಿಲ್ಲಾ ದೇಹದಾರ್ಢ್ಯ ಮತ್ತು ಫಿಟ್‌ನೆಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಡಿ. ನಾಯ್ಕ ಹಾಗೂ ಹೆಲ್ತ್ ಪಾಯಿಂಟ್‌ನ ಅನಿಲ್ ನಾಯ್ಕ ಇದ್ದರು.

55 ಕೆ.ಜಿ: ಮಣಿಕಂಠ ಮುರ್ಡೇಶ್ವರ (ಫಿಟ್‌ನೆಸ್ ಪಾಯಿಂಟ್, ಶಿರಸಿ), ರಾಮಚಂದ್ರ ಮುಕ್ರಿ (ಮುನ್ಸಿಪಲ್ ವ್ಯಾಯಾಮ ಶಾಲೆ, ಕುಮಟಾ), ಶ್ರೀಕಾಂತ ಉಪ್ಪಾರ (ಹೆಲ್ತ್ ಪಾಯಿಂಟ್, ಕುಮಟಾ)

60 ಕೆ.ಜಿ: ಪ್ರಸಾದ್ ಮುರ್ಡೇಶ್ವರ (ಫಿಟ್‌ನೆಸ್ ಪಾಯಿಂಟ್, ಶಿರಸಿ), ಉದಯ ಹರಿಕಾಂತ (ಹೆಲ್ತ್ ಪಾಯಿಂಟ್ ಕುಮಟಾ), ವಸಂತ ಉಪ್ಪಾರ (ಹೆಲ್ತ್ ಪಾಯಿಂಟ್ ಕುಮಟಾ)

65 ಕೆ.ಜಿ: ಲಕ್ಷ್ಮಣ ನಾಯ್ಕ (ಎಕ್ಸಪ್ಲೋಡ್ ಜಿಮ್, ಶಿರಸಿ), ಕುಮಾರ ನಾಯ್ಕ (ನಿಸರ್ಗ್ ಹೆಲ್ತ್ ಪಾಯಿಂಟ್), ಸಂದೀಪ ಮೂಲೇಕೇರಿ (ಹೆಲ್ತ್ ಪಾಯಿಂಟ್, ಕುಮಟಾ)

70 ಕೆ.ಜಿ: ಆಸಿಫ್ ಮಿರ್ಜಾನಕರ್ (ಪುಣಾಚಿ ಇಂಡಿಯನ್ ಸ್ಟೇಡಿಯಂ), ದೇವರಾಜ ಗೌಡ (ಸುಗ್ರಾ ಜಿಮ್, ಭಟ್ಕಳ), ಸತ್ಯಂ ಶಿರೋಡಕರ್ (ಜೈ ಹನುಮಾನ ಜಿಮ್, ಕಾರವಾರ)

75 ಕೆ.ಜಿ: ರಂಜನ್ ಸಿಂಗ್ (ಸಮೀರ್ ಅಲ್ಟಿಮೇಟ್ ಜಿಮ್, ಕಾರವಾರ), ಸುನಿಲ್ ಸರ್ವೋನಾ (ಫಿಟ್‌ನೆಸ್ ಝೋನ್ ದಾಂಡೇಲಿ), ಸೋಮಾ ಮಾಹೇಕರ್ (ಹೆಲ್ತ್ ಪಾಯಿಂಟ್, ಕುಮಟಾ)

80 ಕೆ.ಜಿ: ಸಚಿನ್ ಮೇಸ್ತ (ಹೆಲ್ತ್ ಪಾಯಿಂಟ್, ಹೊನ್ನಾವರ), ಯಾಸಿಫ್ ಶೇಖ್ (ಫಿಟ್‌ನೆಸ್ ಝೋನ್, ದಾಂಡೇಲಿ), ಅಮನ್ ಶೇಖ್ (ಸಮೀರ್ ಅಲ್ಟಿಮೇಟ್ ಜಿಮ್, ಕಾರವಾರ)

80 ಕೆ.ಜಿ ಮೆಲ್ಪಟ್ಟು: ರಾಜೇಶ ಮಡಿವಾಳ (ಹೆಲ್ತ್ ಪಾಯಿಂಟ್, ಕುಮಟಾ), ಸಂಜಯ್ ನಾಯ್ಕ (ಎಕ್ಸ್‌ಪ್ಲೋಡ್ ಜಿಮ್, ಶಿರಸಿ),  ಚೇತನ್ ನಾಯ್ಕ (ಕ್ಲಬ್ ವಿ ಫಿಟ್‌ನೆಸ್, ಅಂಕೋಲಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT