ಮುಂಡಗೋಡ:ಅವನದ್ದುಮನೆ ಅಂಗಳದಲ್ಲಿ ಆಟವಾಡುವ ವಯಸ್ಸು. ಆದರೆ, ವಯಸ್ಸಿಗೂ ಮೀರಿದ ಸಾಧನೆ ಈ ಆರರ ಪೋರನದ್ದು. ಮೂರನೇ ವಯಸ್ಸಿಗೆಈಜುಕಲಿಯಲು ನೀರಿಗಿಳಿದ. ತರಬೇತುದಾರರು ಅಚ್ಚರಿಪಡುವಂತೆ ಸಾಧನೆ ಮಾಡುತ್ತ, ಈಜು ಕ್ರೀಡೆಯಲ್ಲಿ ಭರವಸೆ ಮೂಡಿಸಿದ್ದಾನೆ.

ತಾಲ್ಲೂಕಿನ ಚಿಗಳ್ಳಿ ಗ್ರಾಮದ ಬಿಎಸ್ಎಫ್ ಯೋಧ ಶಂಭುಲಿಂಗ ಶಿವಾಜಿ ಕೀರ್ತೆಪ್ಪನವರ್ ಅವರ ಪುತ್ರ ಓಂಕಾರ ಈಜಿನಲ್ಲಿ ಹೆಸರು ಮಾಡುತ್ತಿರುವ ಬಾಲಕನಾಗಿದ್ದಾನೆ. ಸದ್ಯ ಬೇಸಿಗೆ ರಜೆಗೆಂದು ಸ್ವಗ್ರಾಮಕ್ಕೆ ಬಂದಿದ್ದಾನೆ.

ರಾಜಸ್ಥಾನದ ಜೋಧಪುರದಲ್ಲಿ ಯೋಧ ಶಂಭುಲಿಂಗ ಸೇವೆ ಸಲ್ಲಿಸುತ್ತಿದ್ದು, ಅಲ್ಲಿನ ಸೇನಾ ವಸತಿ ಆವರಣದಲ್ಲಿರುವ ಈಜುಕೊಳದಲ್ಲಿ ಓಂಕಾರತರಬೇತಿ ಪಡೆಯುತ್ತಿದ್ದಾನೆ. ಈಗಾಗಲೇ14 ವರ್ಷದ ಒಳಗಿನ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗೆದ್ದುಕೊಂಡಿದ್ದಾನೆ.

‘ಸೇನಾಧಿಕಾರಿಗಳ, ಯೋಧರ ಮಕ್ಕಳುಈಜುಕಲಿಯುತ್ತಿರುವುದನ್ನು ಪ್ರತಿದಿನ ವೀಕ್ಷಿಸುತ್ತಿದ್ದ. ಈತನೂ ಕಲಿಯಬಹುದು ಎಂದು ತರಬೇತಿ ಕೊಡಿಸಲಾಯಿತು. ಆದರೆ, ತರಬೇತುದಾರರ ನಿರೀಕ್ಷೆಗೂ ಮೀರಿ ಸಾಧನೆ ಮಾಡುತ್ತಿದ್ದ. ಸದ್ಯ ಮೂರು ಗಂಟೆ ನಿರಂತರ ಅಭ್ಯಾಸ ಮಾಡುವ ಸಾಮರ್ಥ್ಯ ಹೊಂದಿದ್ದಾನೆ. 32 ನಿಮಿಷ ಫ್ರೀಸ್ಟೈಲ್ನಲ್ಲಿಈಜುತ್ತಾನೆ’ ಎನ್ನುತ್ತಾರೆ ಬಾಲಕನ ತಂದೆ ಶಂಭುಲಿಂಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.