‘ಯಂತ್ರದತ್ತ ಚಿತ್ತ’
‘ಸಾಂಪ್ರದಾಯಿಕ ಕೃಷಿ ಪದ್ಧತಿ ಅಪರೂಪವಾಗುತ್ತಿದೆ. ಈಗ ಬಹುತೇಕ ರೈತರು ಟ್ರ್ಯಾಕ್ಟರ್ ಸಹಿತ ಯಂತ್ರೋಪಕರಣಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಎತ್ತುಗಳೊಂದಿಗೆ ಕೃಷಿ ಮಾಡುವುದು ಅಷ್ಟು ಸುಲಭವಲ್ಲ. ಈಗಾಗಲೇ ರೈತರು ಬಿತ್ತನೆ ಬೀಜಕ್ಕಾಗಿ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ, ವಿಚಾರಿಸುತ್ತಿದ್ದಾರೆ. ಒಂದು ವಾರದಿಂದ ಮೋಡ ಕವಿದ ವಾತಾವರಣ, ಆಗಾಗ ಹನಿ ಸುರಿಯುವುದು ರೈತರಿಗೆ ಖುಷಿ ನೀಡಿದೆ’ ಎಂದು ರೈತ ಬಾಬುರಾವ ವಾಲ್ಮೀಕಿ ಹೇಳಿದರು.