ಯಲ್ಲಾಪುರ: ದಾಂಡೇಲಿಯ ವಕೀಲ ಅಜಿತ ನಾಯ್ಕ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆ ವಿರುದ್ಧ ಆರೋಪ ಸಾಬೀತಾಗಿದ್ದು, ಆತನನ್ನು ಅಪರಾಧಿ ಎಂದು ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಘೋಷಿಸಿದೆ.

ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಯಲ್ಲಾಪುರ ಪೀಠದಿಂದ ಶುಕ್ರವಾರ ಈ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಜ.13ರಂದು ಪ್ರಕಟಿಸಲು ನ್ಯಾಯಾಲಯ ನಿರ್ಧರಿಸಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಉಳಿದ ನಾಲ್ವರನ್ನು ಸಾಕ್ಷಿ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಅಜಿತ ನಾಯಕ ವಕಾಲತ್ತು ನಡೆಸಿದ್ದಕ್ಕೆ ಕೋಪಗೊಂಡಿದ್ದ ಪಾಂಡುರoಗ ಕಾಂಬಳೆ ಕೊಲೆ ಮಾಡಿದ್ದಾಗಿ ಪ್ರಕರಣ ದಾಖಲಾಗಿತ್ತು. 2018ರ ಜು.27ರಂದು ದಾಂಡೇಲಿ ನಗರದಲ್ಲಿ ಹತ್ಯೆ ನಡೆದಿತ್ತು.

ಅಪರಾಧಿಗೆ ನೆರವಾಗಿದ್ದ ಆರೋಪ ಹೊತ್ತಿದ್ದ ವಿನಾಯಕ ಕರ್ನಿಂಗ್, ಇ.ಎಲ್.ಮಂಜುನಾಥ, ನಜೀರ ಅಹ್ಮದ್ ಲಾಲುಸಾಬ್ ಜಮಾಲಿ ಹಾಗೂ ಈಶ್ವರ ಶೆಟ್ಟಿಯಾರ್ ಖುಲಾಸೆಗೊಂಡಿದ್ದಾರೆ.

ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದ್ದರು. ಈ ಪ್ರಕರಣದ ಬಗ್ಗೆ ಆಗಿನ ಪಿಐ ಎ.ಎ.ಮುಜಾವರ್ ತನಿಖೆ ನಡೆಸಿದ್ದರು. ಪಿ.ಸಿ.ಮಂಜುನಾಥ ಎಚ್ ಶೆಟ್ಟಿ ಸಹಾಯಕ ತನಿಖಾಧಿಕಾರಿಯಾಗಿ ಕೆಲಸ ಮಾಡಿದರು. ನಂತರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಸಿಐಡಿ ಕೂಡ ತನಿಖೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.