ಭಟ್ಕಳ: ಮೀನುಗಾರಿಕೆ ನಡೆಸಲು ತಾಲ್ಲೂಕಿನ ಜಾಲಿ ಕಡಲತೀರದಿಂದ ಸಾಂಪ್ರದಾಯಿಕ ದೋಣಿಯಲ್ಲಿ ಬುಧವಾರ ಮಧ್ಯಾಹ್ನ ತೆರಳಿದ್ದ ನಾಲ್ವರು ಅರಬ್ಬಿ ಸಮುದ್ರದಲ್ಲಿ ಕಣ್ಮರೆಯಾಗಿದ್ದಾರೆ.

ಮೀನುಗಾರರು ಇದ್ದ ದೋಣಿ ಮಗುಚಿ ಬಿದ್ದಿದ್ದು, ಅಲೆಗಳ ರಭಸಕ್ಕೆ ದಡದ ಬಳಿ ಬಂದಿದೆ. ಅದರಲ್ಲಿದ್ದ ಮೀನುಗಾರರು ಸಮುದ್ರದ ಅಲೆಗಳಿಗೆ ಸಿಲುಕಿ ಕಣ್ಮರೆ ಆಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದೋಣಿಯಲ್ಲಿ 6 ಮಂದಿ ಇದ್ದರು. ಅವರ ಪೈಕಿ ಇಬ್ಬರು ಈಜಿ ದಡ ಸೇರಿದ್ದಾರೆ. ಜಾಲಿಕೋಡಿಯ ರಾಮಕೃಷ್ಣ ಮೊಗೇರ (40), ಅಳ್ವೆಕೋಡಿಯ ಸತೀಶ ಮೊಗೇರ (26), ಗಣೇಶ ಮೊಗೇರ (27), ನಿಶ್ಚಿತ ಮೊಗೇರ (30) ಕಣ್ಮರೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.