ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ ಪುರಸಭೆ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್‍ಗೆ ತಲಾ ಒಂದು ಸ್ಥಾನ

Published 30 ಡಿಸೆಂಬರ್ 2023, 14:38 IST
Last Updated 30 ಡಿಸೆಂಬರ್ 2023, 14:38 IST
ಅಕ್ಷರ ಗಾತ್ರ

ಅಂಕೋಲಾ: ಇಲ್ಲಿನ ಪುರಸಭೆಯ ಎರಡು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದು ಸ್ಥಾನ ಗಳಿಸಿವೆ.

ವಾರ್ಡ್ ನಂ. 15ರ ಪಳ್ಳಿಕೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಜನೀನ್ ಮನ್ಸೂರ್ ಸೈಯದ್ ಬಿಜೆಪಿ ಅಭ್ಯರ್ಥಿ ಜೈರಾಬಿ ಬೇಂಗ್ರೆ ಅವರ ವಿರುದ್ಧ 65 ಮತಗಳ ಅಂತರದ ಗೆಲುವು ಸಾಧಿಸಿದರು. ನಾಜನೀನ್ 290 ಮತಗಳನ್ನು ಪಡೆದಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಜೈರಾಬಿ 225 ಮತಗಳನ್ನು ಪಡೆದುಕೊಂಡರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಕವಿತಾ ಗಣಪತಿ ನಾಯ್ಕ 191 ಮತಗಳನ್ನು ಪಡೆದರೆ 3 ಮತಗಳು ನೋಟಾಕ್ಕೆ ಚಲಾಯಿಸಲ್ಪಟ್ಟಿವೆ.

ವಾರ್ಡ್ ನಂ.16ರ ಗುಡಿಗಾರ ಗಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ನಾಯ್ಕ ಜಯಗಳಿಸಿದ್ಧಾರೆ. ಅವರು 276 ಮತಗಳನ್ನು ಪಡೆದರೆ ಅವರ ಸಮೀಪದ ಪ್ರತಿಸ್ಪರ್ದಿ ಪಕ್ಷೇತರ ಅಭ್ಯರ್ಥಿ ಪ್ರಕಾಶ ಶಾಂತಾರಾಮ ನಾಯ್ಕ 153 ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಗೋವಿಂದ ನಾಯ್ಕ 137 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಈ ವಾರ್ಡ್‌ನಲ್ಲಿಯೂ ಮೂರು ನೋಟಾ ಮತಗಳು ಚಲಾಯಿತವಾಗಿವೆ.

ಡಿ.27 ರಂದು ಉಪಚುನಾವಣೆ ನಡೆದಿತ್ತು. ಶನಿವಾರ ಮತ ಎಣಿಕೆ ಪ್ರಕ್ರಿಯೆ ಸುಗಮವಾಗಿ ನಡೆಯಿತು. 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 9 ಸದಸ್ಯರನ್ನು ಹೊಂದಿದಂತಾಗಿದೆ. ಐದು ಪಕ್ಷೇತರ ಸದಸ್ಯರಿದ್ದಾರೆ.

ವಿಶ್ವನಾಥ ನಾಯ್ಕ
ವಿಶ್ವನಾಥ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT