ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ವಿಷಯದಲ್ಲಿ ಬಿಜೆಪಿ ಸುಮ್ಮನಾಗಲಿ: ಸಚಿವ ಮಂಕಾಳ ವೈದ್ಯ

Published : 1 ಅಕ್ಟೋಬರ್ 2024, 13:27 IST
Last Updated : 1 ಅಕ್ಟೋಬರ್ 2024, 13:27 IST
ಫಾಲೋ ಮಾಡಿ
Comments

ಕಾರವಾರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರದೆ ಅವರ ಪತ್ನಿ ಮುಡಾ ನಿವೇಶನಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಬಿಜೆಪಿ ನಾಯಕರ ಮಿತಿಮೀರಿದ ಆರೋಪದಿಂದ ಅವರು ನೊಂದು ಹೀಗೆ ನಿರ್ಧರಿಸಿದ್ದಾರೆಯೇ ಹೊರತು ತಪ್ಪಿತಸ್ಥ ಭಾವನೆಯಿಂದ ಅಲ್ಲ’ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

‘ಮುಡಾ ನಿವೇಶನ ಖರೀದಿ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಅವರ ಪತ್ನಿಯ ಪಾತ್ರ ಇಲ್ಲ. ತಪ್ಪು ಮಾಡದಿದ್ದರೂ  ಪತಿಯ ಹೆಸರಿಗೆ ಕಳಂಕ ಬಂದಿರುವ ವಿಷಯದಿಂದ ಅವರು ಮಾನಸಿಕವಾಗಿ ನೊಂದಿದ್ದಾರೆ. ಬಿಜೆಪಿ ನಾಯಕರು ಮುಡಾ ವಿಚಾರವಾಗಿ ಹೇಳಿಕೆ ನೀಡುವುದು ಈಗಲಾದರೂ ನಿಲ್ಲಿಸಲಿ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT