ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಗೇರಿ ಗೆಲುವಿಗೆ ಪ್ರಾರ್ಥಿಸಿ ಮಂಜುಗುಣಿಗೆ ಪಾದಯಾತ್ರೆ 

Last Updated 5 ಏಪ್ರಿಲ್ 2023, 16:35 IST
ಅಕ್ಷರ ಗಾತ್ರ

ಶಿರಸಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ನೆಚ್ಚಿನ ನಾಯಕನ ಪುನರಾಯ್ಕೆ ಬಯಸಿದ ಇಲ್ಲಿನ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಕರ್ನಾಟಕದ ತಿರುಪತಿ ಖ್ಯಾತಿಯ ಮಂಜುಗುಣಿಗೆ ಬುಧವಾರ ರಾತ್ರಿ 28 ಕಿಮೀ ಪಾದಯಾತ್ರೆ ನಡೆಸಿದರು.

ಗುರುವಾರ ಮಂಜುಗುಣಿ ಕ್ಚೇತ್ರದಲ್ಲಿ ವೆಂಕಟರಮಣ ದೇವರ ಮಹಾರಥೋತ್ಸವ ನಡೆಯುತ್ತಿರುವ ಹಿನ್ನಲೆಯಲ್ಲಿ ಶಿರಸಿ ಯುವ ಮೊರ್ಚಾ ಕಾರ್ಯಕರ್ತರು ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ 7ನೇ ಬಾರಿಯ ಗೆಲುವಿಗೆ ಪ್ರಾರ್ಥಿಸಿ ಯಾತ್ರೆ ಕೈಗೊಂಡರು.
ಯುವ ಮೊರ್ಚಾದ 20ಕ್ಕೂ ಹೆಚ್ಚಿನ ಕಾರ್ಯಕರ್ತರು ನಗರದ ರಾಯರಪೇಟೆಯಲ್ಲಿ ಇರುವ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿ ನಂತರ ಮಂಜುಗುಣಿಗೆ ಪಾದಯಾತ್ರೆ ಮೂಲಕ ತೆರಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮೊರ್ಚಾದ ನಗರ ಘಟಕ ಅಧ್ಯಕ್ಷ ನಾಗರಾಜ ನಾಯ್ಕ, ಕ್ಷೇತ್ರದ ಅಭಿವೃದ್ಧಿಗೆ ಸದಾ ಕೊಡುಗೆ ನೀಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಚುನಾವಣೆಯಲ್ಲಿ ಗೆಲ್ಲಬೇಕು. ನಂತರದ ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆಗೂ ಏರಬೇಕು. ಇದರ ಜೊತೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯದ ಉದ್ದೇಶಕ್ಕಾಗಿ ಪಾದಯಾತ್ರೆ ಸೇವೆ ಮಾಡುತ್ತಿದ್ದೇವೆ. ಮಂಜುಗುಣಿ ಕ್ಷೇತ್ರ ವೆಂಕಟರಮಣ ದೇವರ ನೆಲೆಯಿಂದಾಗಿ ಭಕ್ತರಿಗೆ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಬೇಡಿಕೊಂಡಿದ್ದು ಈಡೇರುವುದು ನಿಶ್ಚಿತ ಎಂದರು.

ಪಾದಯಾತ್ರೆಯಲ್ಲಿ ಯುವಮೊರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಶಾಲ ಮರಾಠೆ ಹಾಗೂ ಇತರರು ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT