‘ವೈಯಕ್ತಿಕ ದ್ವೇಷದಿಂದ ವಿನಾಯಕ ಅವರ ಹತ್ಯೆಗೆ ಗುರುಪ್ರಸಾದ್ ಸುಪಾರಿ ನೀಡಿದ್ದರು. ಇಬ್ಬರೂ ಸಂಬಂಧಿಗಳೂ ಆಗಿದ್ದರು. ಗೋವಾದ ಪೊಂಡಾದಲ್ಲಿರುವ ತಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಅಸ್ಸಾಂ ಮೂಲದ ಲಕ್ಷ್ಮಿಜ್ಯೋತಿನಾಥ, ಬಿಹಾರ ಮೂಲದ ಮಾಸುಮ ಮಹೇಂದ್ರಾಪುರ ಮತ್ತು ಅಜ್ಮಲ್ ಪಯರನಿಯಾ ಎಂಬುವವರನ್ನು ಬಳಸಿಕೊಂಡಿದ್ದರು. ಈ ಮೂವರು ಸೇರಿ ಮಾರಕಾಸ್ತ್ರಗಳಿಂದ ಸೆ.22 ರಂದು ವಿನಾಯಕ ಅವರ ಹತ್ಯೆ ಮಾಡಿದ್ದರು’ ಎಂದೂ ವಿವರಿಸಿದ್ದಾರೆ.