ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ನಕಲಿ ದಾಖಲೆ ನೀಡಿ ಮೋಸ: 19 ಜನರ ಮೇಲೆ ಪ್ರಕರಣ ದಾಖಲು

Published 23 ಜೂನ್ 2024, 16:18 IST
Last Updated 23 ಜೂನ್ 2024, 16:18 IST
ಅಕ್ಷರ ಗಾತ್ರ

ಶಿರಸಿ: ಕಾರು ಖರೀದಿ ಹೆಸರಿನಲ್ಲಿ ಬ್ಯಾಂಕ್‍ಗೆ ನಕಲಿ ದಾಖಲೆಪತ್ರಗಳನ್ನು ನೀಡಿ, ಮೋಸ ಮಾಡಿದ 19 ಜನರ ಮೇಲೆ ಶಿರಸಿಯ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಡಿಸಿಸಿ ಬ್ಯಾಂಕ್‍ನ ವಿವಿಧ ಶಾಖೆಗಳಲ್ಲಿ ಆರೋಪಿತರು ನಕಲಿ ದಾಖಲೆ ನೀಡಿ ಸಾಲ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ನಗರದ ವಿಜಯನಗರದ ಸಂತೋಷ ನಾಗೇಶ ನಾಯಕ, ಹೊಸಪೇಟೆ ರಸ್ತೆಯ ಡೌನ್‌ಟೌನ್ ಮೆನ್ಸ್ ಪಾರ್ಲರ್‌ನ ಮಹೇಶ ಅನಂತ ಕೊಲ್ಲಾಪುರ, ತಾರಗೋಡದ ಗುಡ್ಡೆಕೊಪ್ಪದ ಗಣಪತಿ ಈಶ್ವರ ನಾಯ್ಕ, ಅಶೋಕನಗರ ಮೊದಲನೇ ಅಡ್ಡರಸ್ತೆಯ ಕಿರಣ ಸುರೇಶ ಪೊಪಳೆ, ಚೌಕಿಮಠದ ಕಡಲೆಹೊಂಡದ ಸೂರಜ ಈಶ್ವರ ಮುರ್ಡೇಶ್ವರ, ಸುಗಾವಿ ಕಲ್ಲುಂಡಿಕೊಪ್ಪದ ಶ್ರೀಕಾಂತ ಶ್ರೀಕೃಷ್ಣ ರಾವ್, ಕಾಗೇರಿಯ ಮಂಜುನಾಥ ನಾಯಾಯಣ ನಾಯ್ಕ, ನಗರದ ಕೋರ್ಟ್ ರಸ್ತೆಯ ಸತೀಶ ಶಿವರಾಮ ಗುಡಿಗಾರ, ಬಾಪೂಜಿನಗರದ ಹರ್ಷ ಕೆ. ಭಂಡಾರಿ, ನಗರದ ಐದು ರಸ್ತೆ ಸರ್ಕಲ್ ಬಳಿಯ ನಿವಾಸಿ ಪ್ರಸನ್ನ ಶ್ಯಾಮ ಭಂಡಾರಿ, ಸದಾಶಿವಳ್ಳಿಯ ಮಹೇಶ ಕೃಷ್ಣ ನಾಯ್ಕ, ಚಿಪಗಿ ಹೊಸ್ಮನೆಯ ನಾಗರಾಜ ಶಿವು ನಾಯ್ಕ, ಗಣೇಶನಗರದ ಚಂದ್ರಶೇಖರ ದತ್ತಾ ನಾಯ್ಕ, ಮಂಜವಳ್ಳಿಯ ರಾಘವೇಂದ್ರ ನಾರಾಯಣ ಶೆಟ್ಟಿ, ಹಲಸಿನಕೊಪ್ಪದ ಪಾಂಡುರಂಗ ಪುಟ್ಟಯ್ಯ ಆಚಾರಿ, ಕಲ್ಲುಂಡಿಕೊಪ್ಪದ ಸಂದೀಪ ಮೊಗೇರ, ಮರಾಠಿಕೊಪ್ಪದ ಕುಂಬ್ರಿತಗ್ಗು ನಿವಾಸಿ ದತ್ತಾತ್ರೇಯ ವೆಂಕಟ್ರಮಣ ನಾಯ್ಕ, ಬೆಂಗಳೆಯ ದಿಲೀಪ ವೆಂಕಟೇಶ ನಾಯ್ಕ ಹಾಗೂ ವಾನಳ್ಳಿ ಸಮೀಪದ ಗೋಪಿನಮರಿಯ ಮಂಜುನಾಥ ಶಂಭು ನಾಯ್ಕ ಮೇಲೆ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT