ಅಂಬೇವಾಡಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮದಲ್ಲಿ ಕೂಸಿನ ಮನೆಗಳಿಗೆ ಸುಣ್ಣ ಬಣ್ಣ ಬಳಿದು ಲೋಗೊ ಬಿಡಿಸುತ್ತಿರುವುದು. ದಾಂಡೇಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಹಾಲಮ್ಮನವರ ಹಾಗೂ ಸಿಬ್ಬಂದಿ ಇದ್ದಾರೆ
‘ಮಾದರಿ ಕೇಂದ್ರವಾಗಿಸಲು ಯತ್ನ’
ಮಕ್ಕಳ ಆರೋಗ್ಯ ಹಾಗೂ ಬೌದ್ಧಿಕ ಶಕ್ತಿಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾರಣ ಚಿಕ್ಕಮಕ್ಕಳಿಗೆ ಆಹಾರವನ್ನು ನೀಡುವ ವಿಷಯವಾಗಿ ಶಿಶು ಅಭಿವೃದ್ಧಿ ಇಲಾಖೆಗೆ ಜವಾಬ್ದಾರಿ ನೀಡುವ ಸಂಬಂಧ ಸಭೆ ನಡೆಸಲಾಗಿದೆ. ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ತಾಲ್ಲೂಕಿನ ಕೂಸಿನ ಮನೆಯನ್ನು ಜಿಲ್ಲೆಗೆ ಮಾದರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲಾಗುವುದು ಎನ್ನುತ್ತಾರೆ ಅಂಬಿಕಾನಗರದ ಪಿಡಿಒ ಸಂತೋಷ ರಾಥೋಡ.