ದಾಂಡೇಲಿ: ವೃದ್ಧೆಯೊಬ್ಬರ ಅತ್ಯಾಚಾರ ಮಾಡಿ, ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ನಗರಠಾಣೆ ಪೋಲಿಸರು ಶನಿವಾರ ಬಂಧಿಸಿದ್ದಾರೆ. ಬಂಧಿಸುವ ಸಮಯದಲ್ಲಿ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

ಫೈರೋಜ್ ಯರಗಟ್ಟಿ (23) ಬಂಧಿತ ಆರೋಪಿ. ಈತ ಗುರುವಾರ ಮಧ್ಯಾಹ್ನ ಬೈಲಪಾರು ಐ.ಪಿ.ಎಂ ಪ್ರದೇಶದ ಅರಣ್ಯ ಪ್ರದೇಶದಲ್ಲಿ 60 ವರ್ಷದ ಅಂಗವಿಕಲ ವೃದ್ಧೆಯನ್ನು ಅತ್ಯಾಚಾರ ಎಸಗಿದ್ದ ಆರೋಪ ಹೊತ್ತಿದ್ದಾನೆ. ಅತ್ಯಾಚಾರ ಮಾಡಿ ಮೊಬೈಲ್ ಹಾಗೂ ₹5,000 ಕಳವು ಮಾಡಿ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದರು.

'ವೃದ್ಧೆಯು ಅತ್ಯಾಚಾರ ಮಾಡಿದ ಆರೋಪಿಯನ್ನು ಪತ್ತೆ ಹಚ್ಚಲು ಸುಮಾರು ನೂರು ಜನರ ಪೋಟೋ ತೋರಿಸಿದ ನಂತರ ಆರೋಪಿಯನ್ನು ಗುರುತಿಸಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಳಗಿ ಅರಣ್ಯ ಪ್ರದೇಶದಲ್ಲಿ ಎಸ್ಐ ಕಿರಣ್ ಪಾಟೀಲ ನೇತೃತ್ವದ ತಂಡವು ಪತ್ತೆ ಹಚ್ಚಿ ಕರೆದುಕೊಂಡು ಬರುತ್ತಿರುವಾಗ ಪೋಲಿಸರ ಮೇಲೆ ಏಕಾಏಕಿ ಕಲ್ಲು ಮತ್ತು ಚಾಕುವಿನಿಂದ ದಾಳಿ ಮಾಡಿದ್ದಾನೆ. ಪೊಲೀಸರು ಎಚ್ಚರಿಸಿದ್ದರೂ ದಾಳಿ ನಿಲ್ಲಿಸದ ಕಾರಣಕ್ಕೆ ಆತನ ಕಾಲಿಗೆ ಗುಂಡು ಹಾರಿಸಬೇಕಾಯಿತು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಸುದ್ದಿಗೋಷ್ಠಿ ನಡೆಸಿ ವಿವರಿಸಿದ್ದಾರೆ.

ಗಾಯಗೊಂಡ ಪೊಲೀಸ್

ಸಿಬ್ಬಂದಿ ಇಮ್ರಾನ್ ಕಂಬಾರಗಣವಿ, ಕೃಷ್ಣಪ್ಪ ಬೆಳ್ಳಿವರಿ ಹಾಗೂ ಆರೋಪಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಕಾರ್ಯಾಚರಣೆಯಲ್ಲಿ ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಪ್ರಭಾರಿ ಸಿಪಿಐ ಜಯಪಾಲ್ ಪಾಟೀಲ, ದಾಂಡೇಲಿ ನಗರ ಠಾಣೆಯ ಎಸ್ಐ ಅಮೀನ ಅತ್ತಾರ, ಯಲ್ಲಾಪುರ ಎಸ್ಐ ರಮೇಶ, ಜೊಯಿಡಾ ಪಿಐ ಚಂದ್ರಶೇಖರ ಹರಿಹರ, ಎಸ್ಐ ಮಹೇಶ್ ಮಾಳಿ, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.