ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರೂರು ಗುಡ್ಡ ಕುಸಿತ: ಕಾಣೆಯಾಗಿದ್ದ ಕೇರಳ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆ

Published : 25 ಸೆಪ್ಟೆಂಬರ್ 2024, 10:32 IST
Last Updated : 25 ಸೆಪ್ಟೆಂಬರ್ 2024, 10:32 IST
ಫಾಲೋ ಮಾಡಿ
Comments

ಶಿರೂರು (ಉತ್ತರ ಕನ್ನಡ ಜಿಲ್ಲೆ): ಎರಡು ತಿಂಗಳ ಹಿಂದೆ ಗುಡ್ಡ ಕುಸಿತ ದುರಂತದ ವೇಳೆ ಕಣ್ಮರೆಯಾಗಿದ್ದ ಕೇರಳ ಕೋಯಿಕ್ಕೋಡ್‌ನ ಲಾರಿ ಚಾಲಕ ಅರ್ಜುನ್ ಮೃತದೇಹ ಬುಧವಾರ ಪತ್ತೆಯಾಗಿದೆ.

ಗಂಗಾವಳಿ ನದಿಯ ಆಳದಲ್ಲಿ ಮಣ್ಣು, ಕಲ್ಲಿನ ಅಡಿ ನುಜ್ಜುಗುಜ್ಜಾದ ಸ್ಥಿತಿಯಲ್ಲಿದ್ದ ಭಾರತ್ ಬೆಂಜ್ ಕಂಪನಿಯ ಲಾರಿಯೊಳಗೆ ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಇದು ಅರ್ಜುನ್ ಅವರದ್ದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಖಚಿತಪಡಿಸಿದ್ದಾರೆ.

ಜು.16 ರಂದು ಗುಡ್ಡ ಕುಸಿತದ ವೇಳೆ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಸಹಿತ ಅರ್ಜುನ್ ಕಣ್ಮರೆಯಾಗಿದ್ದರು. ಅವರ ಪತ್ತೆಗೆ ಕೇರಳ ಸರ್ಕಾರ ವ್ಯಾಪಕ ಒತ್ತಡ ಹೇರಿತ್ತು.

ದುರ್ಘಟನೆಯಲ್ಲಿ ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೊಕೇಶ ನಾಯ್ಕ ಅವರನ್ನು ಪತ್ತೆ ಮಾಡಬೇಕಿದೆ. ಘಟನೆಯಲ್ಲಿ ಈವರೆಗೆ 9 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT