ಭಾನುವಾರ, ಏಪ್ರಿಲ್ 2, 2023
33 °C

ದಾಖಲೆ ರಹಿತ ₹20 ಲಕ್ಷ ನಗದು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಮಡಗಾಂವನಿಂದ ಎರ್ನಾಕುಲಂಗೆ ಸಂಚರಿಸುತ್ತಿದ್ದ ರೈಲಿನಲ್ಲಿ ದಾಖಲೆ ಹೊಂದಿಲ್ಲದೆ ಸಾಗಿಸುತ್ತಿದ್ದ ₹20,09,720 ಲಕ್ಷದಷ್ಟು ನಗದು ಹಣವನ್ನು ರೈಲ್ವೆ ಪೊಲೀಸರು ಸೋಮವಾರ ಇಲ್ಲಿನ ಶಿರವಾಡ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ಸತಾರಾ ಪಟ್ಟಣದ ರಮೇಶ ಡೋಕಳೆ ಹಣ ಸಾಗಿಸುತ್ತಿದ್ದ ವ್ಯಕ್ತಿ. ‘ಚೀಲವೊಂದರಲ್ಲಿ ನಗದು ರಾಶಿ ಇಟ್ಟುಕೊಂಡು ಸಾಗುತ್ತಿದ್ದರು. ಅನುಮಾನಗೊಂಡು ಪರಿಶೀಲಿಸಿದಾಗ ಹಣ ಪತ್ತೆಯಾಯಿತು. ಅದಕ್ಕೆ ಸೂಕ್ತ ದಾಖಲೆ ಅವರ ಬಳಿ ಇರಲಿಲ್ಲ’ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಗ್ರಾಮೀಣ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.