ದೇವತಾ ವೇಷಗಳನ್ನು ಅಲಂಕರಿಸಿದ್ದ ಕಲಾ ತಂಡದ ಸದಸ್ಯರು ಮೆರವಣಿಗೆಯಲ್ಲಿ ವಿಶೇಷವಾಗಿ ಆಕರ್ಷಿಸಿದರು. ಮಕ್ಕಳು, ಮಹಿಳೆಯರಿಂದ ಹಿಡಿದು ಎಲ್ಲರೂ ದೇವತಾ ವೇಷಧಾರಿಗಳೊಂದಿಗೆ ‘ಸೆಲ್ಫಿ’ ತೆಗೆದುಕೊಳ್ಳುತ್ತಿರುವುದು ಕಂಡುಬಂತು. ಭಾರತೀಯ ಕಲೆ, ಸಂಸ್ಕೃತಿ ಬಿಂಬಿಸುತ್ತ ಹೆಜ್ಜೆ ಹಾಕಿದ ಕಲಾ ತಂಡದ ಸದಸ್ಯರು ಒಂದೆಡೆಯಾದರೆ, ಹಾಡಿಗೆ ಕುಣಿಯುತ್ತ ಚಿಣ್ಣರು ಮುಂದೆ ಮುಂದೆ ಸಾಗುತ್ತಿರುವುದು ಮತ್ತೊಂದೆಡೆ ಕಂಡುಬಂತು. ಸಿಡಿಮದ್ದು ಸುಡುವುದು, ಡಿಜೆ ಸದ್ದಿಗೆ ಕಡಿಮೆ ಮಹತ್ವ ನೀಡಿದ ದೈವಜ್ಞ ಸಮಾಜದವರ ಗಣಪತಿ ವಿಸರ್ಜನಾ ಮೆರವಣಿಗೆ ಜನರ ಮೆಚ್ಚುಗೆಗೆ ಕಾರಣವಾಯಿತು.