ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ ಜನತೆ ಕೃಷಿಯಲ್ಲಿ ತೊಡಗಿಕೊಳ್ಳಿ: ಕುದಿ ಶ್ರೀನಿವಾಸ್ ಭಟ್

Published 26 ಜೂನ್ 2024, 13:39 IST
Last Updated 26 ಜೂನ್ 2024, 13:39 IST
ಅಕ್ಷರ ಗಾತ್ರ

ಗೋಕರ್ಣ: ಕರಾವಳಿಯಲ್ಲಿ ತೆಂಗು, ಭತ್ತ ಪ್ರಮುಖ ವಾಣಿಜ್ಯ ಬೆಳೆಗಳು. ಯುವ ಜನರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಕೃಷಿಕರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಲಾಭದಾಯಕ ಬೆಳೆಗಳನ್ನು ಬೆಳೆಯಬೇಕು’ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಹೇಳಿದರು.

ಸಮೀಪದ ಹಿರೇಗುತ್ತಿಯಲ್ಲಿ ಸವಿ ಪೌಂಡೇಷನ್ (ರಿ) ಮೂಡುಬಿದ್ರೆ ಹಾಗೂ ಆಶ್ರಯ ಪೌಂಡೇಷನ್ ಹಿರೇಗುತ್ತಿ ಆಶ್ರಯದಲ್ಲಿ ಮಂಗಳವಾರ ನಡೆದ ವೈಜ್ಞಾನಿಕ ಪದ್ಧತಿಯಲ್ಲಿ ಲಾಭದಾಯಕ ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ತೆಂಗಿನ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸವಿ ಪೌಂಡೇಚನ್‌ನ ಸಂದೀಪ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಹತ್ತು-ಹಲವು ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಆಶ್ರಯ ಪೌಂಡೇಷನ್ ಹಾಗೂ ಸವಿ ಪೌಂಡೇಷನ್ ಕಾರ್ಯತತ್ಪರವಾಗಿದೆ. ಸಂಸ್ಥೆಗಳ ಪರಿಸರ ಪ್ರೇಮ ಶ್ಲಾಘನೀಯ. ಪ್ರಕೃತಿಯ ರಕ್ಷಣೆಯಲ್ಲಿಯೇ ಮನುಕುಲದ ಹಿತ ಇದೆ’ ಎಂದರು.

ಕಾರ್ಯಕ್ರಮದಲ್ಲಿ ಆಶ್ರಯ ಪೌಂಡೇಶಷನ್‌ನ ರಾಜೀವ ಗಾಂವಕರ ಹಿರೇಗುತ್ತಿ, ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರಾಜೇಂದ್ರ, ನಾಗರಾಜ ಹಾಗೂ ಕುಮಾರ ಸಾನಿಧ್ಯ, ಎನ್.ಟಿ ನಾಯಕ, ಶ್ರೀಕಾಂತ ನಾಯಕ, ಸಂಗೀತಾ ನಾಯಕ, ಕುಮಾರಿ ಆದಿಶ್ರೀ, ಶ್ರೀಕಾಂತ ನಾಯಕ, ಉದ್ದಂಡ ಗಾಂವಕರ, ಎನ್. ರಾಮು ಹಿರೇಗುತ್ತಿ, ಶಿಕ್ಷಕ ಮಹಾದೇವ ಗೌಡ, ಹರೀಶ ನಾಯಕ, ಉಮೇಶ ನಾಯಕ, ಸುರೇಂದ್ರ ನಾಯಕ, ರಾಮನಾಥ ಕಣಗಿಲ, ಮಮತಾ ಗಾಂವಕರ, ಜಯಾ ಗಾಂವಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT