ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ|ಅತಿಥಿ ಉಪನ್ಯಾಸಕ ಈಶ್ವರ ಗೌಡಾ ಕಣದಲ್ಲಿ: ಗಮನ ಸೆಳೆದ ಪಕ್ಷೇತರ ಅಭ್ಯರ್ಥಿ

ಅತಿಥಿ ಉಪನ್ಯಾಸಕ ಈಶ್ವರ ಗೌಡಾ ಕಣದಲ್ಲಿ
Published 24 ಏಪ್ರಿಲ್ 2023, 12:51 IST
Last Updated 24 ಏಪ್ರಿಲ್ 2023, 12:51 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಮೀಪದ ವಕ್ಕನಳ್ಳಿ ಗ್ರಾಮದ ಈಶ್ವರ ಗೌಡಾ (34), ಈ ಸಲದ ವಿಧಾನ ಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಎಂಕಾಂ ಪದವಿ ಗಳಿಸಿ ಕಳೆದ 11 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಈಶ್ವರ ಗೌಡ ರಾತ್ರಿ ಹೊತ್ತು ಸಮೀಪದ ಹೊಳಗದ್ದೆ ಟೋಲ್ ನಾಕಾದಲ್ಲಿ ವ್ಯವಸ್ಥಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

‘ಶಾಲಾ-ಕಾಲೇಜುಗಳಲ್ಲಿ ನಾವೆಲ್ಲ ಪ್ರಜಾಪ್ರಭುತ್ವ, ರಾಷ್ಟ್ರ ನಾಯಕರು, ಸರ್ಕಾರಿ ವ್ಯವಸ್ಥೆಯ ಬಗ್ಗೆ ಪಠ್ಯ ಪುಸ್ತಕದಲ್ಲಿ ಓದಿರುವಂತೆ ವಾಸ್ತವದಲ್ಲಿ ಯಾವುದೂ ನಡೆಯುತ್ತಿಲ್ಲ. ಭ್ರಷ್ಟಾಚಾರ ಸಮಾಜದ ಭಾಗವೇ ಆಗಿ ಹೋಗಿರುವ ಈ ವ್ಯವಸ್ಥೆಗೆ ಹೊಸ ಪರ್ಯಾಯಗಳನ್ನು ಕೊಡಲು ಸಾಧ್ಯವಿದೆ ಎನ್ನುವುದನ್ನು ಯುವ ಪೀಳಿಗೆಗೆ ಸಾಂಕೇತಿಕವಾಗಿ ತೋರಿಸಲು ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ' ಎಂದರು.

‘ಹಾಲಕ್ಕಿ ಸೇರಿ ಅನೇಕ ತಳ ಸಮುದಾಯದವರ ಬದುಕು ಇಂದು ಹಾಗೇಯೇ ಇದ್ದು ಇದಕ್ಕೆಲ್ಲ ಪರಿಹಾರ ಏನು ಎನ್ನುವುದರ ಬಗ್ಗೆ ಯಾರಲ್ಲೂ ಉತ್ತರವಿಲ್ಲವಾಗಿದೆ. ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ರಾಷ್ಟ್ರೀಯ ಪಕ್ಷಗಳು ಇಂಥ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನನಗೆ ಸಾವಿರಾರು ಜನ ವಿದ್ಯಾರ್ಥಿ ಸ್ನೇಹಿತರು, ಅಧ್ಯಾಪಕ ಗೆಳೆಯರು ಇದ್ದು, ನಾಮಪತ್ರ ಸಲ್ಲಿಸಿ, ಪ್ರಚಾರ ಆರಂಭಿಸಿದಾಗ ಅವರೆಲ್ಲ ಹುರಿದುಂಬಿಸುತ್ತಿದ್ದಾರೆ. ಅಂಥವರ ಮನಸ್ಸಿನಲ್ಲಿ ಸಮಾಜದ ಈ ವ್ಯವಸ್ಥೆಗೆ ಹೊಸ ಪರ್ಯಾಯದ ಬೀಜ ಬಿತ್ತಬೇಕು ಎನ್ನುವುದು ನನ್ನ ಸ್ಪರ್ಧೆಯ ಆಶಯ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT