ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಶತಾಯುಷಿ ಕಲಾವಿದೆಗೆ ರಾಜ್ಯೋತ್ಸವ ಗೌರವದ ಗರಿ

Published 31 ಅಕ್ಟೋಬರ್ 2023, 11:38 IST
Last Updated 31 ಅಕ್ಟೋಬರ್ 2023, 11:38 IST
ಅಕ್ಷರ ಗಾತ್ರ

ಕಾರವಾರ: ವಯಸ್ಸು ನೂರು ದಾಟಿದ್ದರೂ ಜನಪದ ಕಲೆಯೆಡೆಗಿನ ಆಸಕ್ತಿಗೆ ಕುಂದುಬಾರದಂತೆ ತನ್ನ ಕಲೆಯನ್ನು ಮಕ್ಕಳಿಗೆ ಧಾರೆ ಎರೆಯುತ್ತಿರುವ ಹಳಿಯಾಳ ತಾಲ್ಲೂಕು ಸಾಂಬ್ರಾಣಿ ಗ್ರಾಮದ ಹುಸೇನಾಬಿ ಬುಡೆನ್ ಸಾಬ್ ಸಿದ್ದಿ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.

ಸಿದ್ದಿ ಸಮುದಾಯದ ಸಾಂಪ್ರದಾಯಿಕ ಡಮಾಮಿ ನೃತ್ಯದ ಕಲಾವಿದರಾಗಿರುವ ಜತೆಗೆ ಸಿದ್ದಿ ಮುಸ್ಲಿಂ ಸಮುದಾಯದಲ್ಲಿ ಮದುವೆ ವೇಳೆ ಹಾಡುವ ‘ಸಿದ್ದಿನಾಸ’ ಹಾಡುಗಾರ್ತಿಯಾಗಿ ಹುಸೇನಾಬಿ ಹೆಸರು ಮಾಡಿದ್ದಾರೆ. 103 ವರ್ಷದ ಅವರು ಬಾಲ್ಯದಿಂದಲೂ ಈ ಕಲೆಯನ್ನು ರೂಢಿಗತವಾಗಿಸಿಕೊಂಡವರಾಗಿದ್ದಾರೆ. ನೂರಾರು ಮದುವೆ ಕಾರ್ಯಕ್ರಮಗಳಲ್ಲಿ, ಸಾಂಸ್ಕೃತಿಕ ಉತ್ಸವಗಳಲ್ಲಿ ಸಿದ್ದಿನಾಸ ಹಾಡುಗಳನ್ನು ಹಾಡಿದ್ದ ಅವರು ಡಮಾಮಿ ನೃತ್ಯದ ತಂಡವನ್ನೂ ಮುನ್ನಡೆಸಿ ಜಿಲ್ಲೆಯಾದ್ಯಂತ ಚಿರಪರಿಚಿತರಾಗಿದ್ದರು.

‘ಹಿರಿಯರಿಂದ ಬಳುವಳಿಯಾಗಿ ಬಂದ ಕಲೆಯನ್ನು ಪ್ರದರ್ಶಿಸುತ್ತ ಬಂದಿದ್ದೇನೆ. ಹಿಂದಿನ ಕಾಲದವರಿಗೆ ಪ್ರಚಾರ ಸಿಕ್ಕಿರಲಿಲ್ಲ. ನನ್ನ ಕಲೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿದ್ದಲ್ಲದೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದವು. ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದಕ್ಕೆ ಖುಷಿಯಾಗಿದೆ’ ಎಂದು ಹುಸೇನಾಬಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT