ಕಾರವಾರ: ಇಲ್ಲಿನ ಕಾಳಿ ನದಿಗೆ ಏಕಾಏಕಿ ಕುಸಿದುಬಿದ್ದಿದ್ದ 665 ಮೀಟರ್ ಉದ್ದದ, 41 ವರ್ಷದಷ್ಟು ಹಳೆಯ ಸೇತುವೆಯ ಅವಶೇಷಗಳನ್ನು ಎಂಟು ತಿಂಗಳಲ್ಲಿ ತೆರವುಗೊಳಿಸುವ ಕೆಲಸ ಮುಗಿದಿದೆ. ಆದರೆ, ‘ಹೊಸ ಸೇತುವೆ ನಿರ್ಮಾಣ ಯಾವಾಗ’ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಇಲ್ಲಿನ ಕೋಡಿಬಾಗದಲ್ಲಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಕಾಳಿ ನದಿಯ ಹಳೆಯ ಸೇತುವೆ 2024ರ ಆಗಸ್ಟ್ 7ರಂದು ಕುಸಿದುಬಿದ್ದಿತ್ತು. ಅವಘಡ ನಡೆದ ಒಂದು ತಿಂಗಳ ಬಳಿಕ (ಸೆಪ್ಟೆಂಬರ್ 9ರಂದು) ಸೇತುವೆಯ ಅವಶೇಷ ತೆರವುಗೊಳಿಸುವ ಕೆಲಸ ಆರಂಭಗೊಂಡಿತ್ತು. ಮೇ ಮೊದಲ ವಾರದಲ್ಲೇ ಅವಶೇಷ ತೆರವು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಘೋಷಿಸಿ, ಯಂತ್ರೋಪಕರಣಗಳನ್ನು ಸ್ಥಳದಿಂದ ರವಾನಿಸಲಾಗಿದೆ.

2017ರಲ್ಲಿ ನಿರ್ಮಾಣಗೊಂಡಿರುವ ಸೇತುವೆ ಮೇಲೆ ಸದ್ಯ ವಾಹನ ಸಂಚಾರ ನಡೆಯುತ್ತಿದೆ. ಹಳೆಯ ಸೇತುವೆ ತೆರವುಗೊಳಿಸುವ ಕಾರ್ಯಾಚರಣೆ ವೇಳೆ ಕಾಂಕ್ರೀಟ್ ಭಾಗವೊಂದು ಹೊಸ ಸೇತುವೆಗೆ ಬಡಿದಿದ್ದು ಜನರಲ್ಲಿ ಆತಂಕ ಹುಟ್ಟಿಸಿತ್ತು. ಹೀಗಾಗಿ, ಹೊಸ ಸೇತುವೆ ಸುರಕ್ಷತೆಯ ಬಗ್ಗೆ ಜನರಲ್ಲಿ ಶಂಕೆ ಮೂಡಿದೆ.

‘ಹಳೆಯ ಸೇತುವೆ ಅಧಿಕ ಭಾರ ತಾಳಲಾರದೆ ಕುಸಿದುಬಿದ್ದಿದೆ. ಹೊಸ ಸೇತುವೆ ಮೇಲೆ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿದ್ದು, ಒತ್ತಡ ತಗ್ಗಿಸುವ ಅನಿವಾರ್ಯತೆ ಇದೆ. ಹೊಸ ಸೇತುವೆ ಕಾಮಗಾರಿ ಆರಂಭಿಸಲು ವಿಳಂಬ ಮಾಡಬಾರದು. ಸಾಧ್ಯವಾದಷ್ಟು ಬೇಗನೆ ಕಾಳಿ ನದಿಗೆ ಇನ್ನೊಂದು ಸೇತುವೆ ನಿರ್ಮಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸದಾನಂದ ಮಾಂಜ್ರೇಕರ್ ಒತ್ತಾಯಿಸಿದ್ದಾರೆ.

‘ಹಳೆಯ ಸೇತುವೆಯನ್ನು ನಿರೀಕ್ಷಿತ ಅವಧಿಯೊಳಗೆ ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆ ವೇಳೆ ಹೊಸ ಸೇತುವೆಗೆ ಯಾವುದೇ ಧಕ್ಕೆ ಉಂಟಾಗಿಲ್ಲ. ಜನರು ಆತಂಕಪಡಬೇಕಿಲ್ಲ’ ಎಂದು ಹೆದ್ದಾರಿ ನಿರ್ಮಿಸುತ್ತಿರುವ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಉಕ್ಕಿನ ಕಮಾನಿನ ಸೇತುವೆ’

‘ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ತಂತ್ರಜ್ಞರು ಪ್ರಾಥಮಿಕ ಸಮೀಕ್ಷೆ ನಡೆಸಿದ್ದಾರೆ. ಉಕ್ಕಿನ ಕಮಾನಿನ ಸೇತುವೆ ನಿರ್ಮಿಸುವುದೇ ಸೂಕ್ತ ಎಂದು ಪ್ರಾಥಮಿಕ ವರದಿ ನೀಡಿದ್ದು ಇದನ್ನೇ ಆಧರಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ಬಳಿಕ ಮುಂದಿನ ಹಂತದ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.