ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಮಧ್ಯರಾತ್ರಿವರೆಗೆ ಕೇಂದ್ರ ಗ್ರಂಥಾಲಯ ಸೇವೆ

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವವರಿಗೆ ಅನುಕೂಲ: ಮನವಿಗೆ ಸ್ಪಂದನೆ
Published 10 ಮಾರ್ಚ್ 2024, 5:00 IST
Last Updated 10 ಮಾರ್ಚ್ 2024, 5:00 IST
ಅಕ್ಷರ ಗಾತ್ರ

ಕಾರವಾರ: ಉದ್ಯೋಗ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡುವವರಿಗೆ ಓದಲು ಸಮಯ, ಸೂಕ್ತ ಸ್ಥಳ ಎಲ್ಲಿದೆ? ಎಂಬ ಚಿಂತೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪರಿಹಾರ ಒದಗಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿರುವ ಗ್ರಂಥಾಲಯವನ್ನು ಮಧ್ಯರಾತ್ರಿಯ ವರೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುವವರಿಗೆ ತೆರೆದಿಡಲು ಕ್ರಮಕೈಗೊಂಡಿದ್ದಾರೆ.

ಜಿಲ್ಲಾ ಕೇಂದ್ರವಾಗಿರುವುದರಿಂದ ಇಲ್ಲಿನ ಸರ್ಕಾರಿ ಕಚೇರಿಗಳಲ್ಲಿ ನೂರಾರು ಸಂಖ್ಯೆಯ ನೌಕರರು ಇಲ್ಲಿ ನೆಲೆಸಿದ್ದಾರೆ. ಹೀಗೆ ಬಂದವರಲ್ಲಿ ಹೊರ ಜಿಲ್ಲೆಗಳಿಂದ ಬಂದವರು ಸಾಕಷ್ಟಿದ್ದಾರೆ. ಬಾಡಿಗೆ ಕೊಠಡಿ ಪಡೆದು ಇಬ್ಬರು, ಮೂವರು ಉಳಿದವರು ಹೆಚ್ಚು. ಚಿಕ್ಕ ವಯಸ್ಸಿನ ನೌಕರರಲ್ಲಿ ಬಹುತೇಕ ಮಂದಿ ಕೆ.ಎ.ಎಸ್., ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ವ್ಯಾಸಂಗ ಮಾಡುವವರಿದ್ದಾರೆ.

ಸ್ನೇಹಿತರೊಂದಿಗೆ ಬಾಡಿಗೆ ಕೊಠಡಿಯಲ್ಲಿ ಉಳಿದವರಿಗೆ ಓದಲು ಸೂಕ್ತ ಜಾಗದ ಕೊರತೆ ಇತ್ತು. ಗ್ರಂಥಾಲಯಕ್ಕೆ ಹೋಗಿ ಓದಬೇಕೆಂದುಕೊಂಡರೆ ಕಚೇರಿ ಕೆಲಸ ಮುಗಿಸಿ ತೆರಳುವುದರೊಳಗೆ ಗ್ರಂಥಾಲಯದ ಬಾಗಿಲು ಮುಚ್ಚಿರುತ್ತಿತ್ತು. ಈಗ ಅವರ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಗ್ರಂಥಾಲಯವನ್ನು ತಡರಾತ್ರಿ 12 ಗಂಟೆ ವರೆಗೆ ತೆರೆದಿಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈಗ ಅಲ್ಲಿಗೆ ಓದಲು ಹಲವರು ಬರುತ್ತಿದ್ದಾರೆ. ಹೀಗೆ ಬರುವವರಲ್ಲಿ ಪೊಲೀಸ್, ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವವರು ಹೆಚ್ಚಿದ್ದಾರೆ.

‘ಗ್ರಂಥಾಲಯಕ್ಕೆ ಬಂದು ಓದುವವರ ಪೈಕಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಮಯ ವಿಸ್ತರಣೆಗೆ ಅವರು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಈಚೆಗೆ ನಡೆದ ಗ್ರಂಥಾಲಯ ನಿರ್ವಹಣಾ ಸಮಿತಿ ಸಭೆಯಲ್ಲಿ ಸಮಯವನ್ನು ತಡರಾತ್ರಿವರೆಗೆ ವಿಸ್ತರಿಸಲು ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರಂತೆ ಕಳೆದ ಒಂದು ತಿಂಗಳಿನಿಂದ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸಮಯ ವಿಸ್ತರಿಸಲಾಗಿದೆ’ ಎಂದು ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಕೆ.ವಿ.ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ 16 ಮಂದಿ ಅ್ಯರ್ಥಿಗಳು ನಿತ್ಯ ಇಲ್ಲಿಗೆ ಭೇಟಿ ನೀಡಿ ತಡರಾತ್ರಿವರೆಗೂ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಹಾಜರಾತಿ ಪುಸ್ತಕ ಇಡಲಾಗಿದ್ದು ನಿತ್ಯ ಬರುವವರು ಅಲ್ಲಿ ಹಾಜರಿ ಹಾಕಿ ಓದುತ್ತಿದ್ದಾರೆ’ ಎಂದರು.

‘ಇಬ್ಬರು ಸ್ನೇಹಿತರೊಂದಿಗೆ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದೇನೆ. ಸರ್ಕಾರಿ ಕಚೇರಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದು ಕೆ.ಎ.ಎಸ್. ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದೆ. ಓದಲು ಸ್ಥಳ, ಸಮಯದ ಕೊರತೆ ಇತ್ತು. ಗ್ರಂಥಾಲಯ ತಡರಾತ್ರಿವರೆಗೆ ತೆರೆದಿಟ್ಟಿರುವುದು ಅನುಕೂಲವಾಗಿದೆ’ ಎಂದು ಸಂದೇಶ್ ಪಾಟೀಲ ಹೇಳಿದರು.

ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿ ಸಮಯ ವಿಸ್ತರಣೆ ಬೆಳಿಗ್ಗೆ 8 ರಿಂದ ತಡರಾತ್ರಿ 12 ಗಂಟೆ ವರೆಗೆ ಗ್ರಂಥಾಲಯ ಕಾರ್ಯನಿರ್ವಹಣೆ 16ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ತಡರಾತ್ರಿವರೆಗೆ ವ್ಯಾಸಂಗಹಗಲಿನಲ್ಲಿ ಉದ್ಯೋಗದಲ್ಲೇ ಸಮಯ ಕಳೆದು ಹೋಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಕಷ್ಟ ಎಂದು ಭಾವಿಸಿದ್ದೆ. ಗ್ರಂಥಾಲಯವನ್ನು ತಡರಾತ್ರಿವರೆಗೂ ತೆರೆದಿಟ್ಟು ಜಿಲ್ಲಾಧಿಕಾರಿ ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಸಂತೋಷ ಮಾನೆ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ

ಸ್ಪರ್ಧಾತ್ಮಕ ಪರೀಕ್ಷೆಗೆ ವ್ಯಾಸಂಗ ಮಾಡುವ ಹಲವು ಅಭ್ಯರ್ಥಿಗಳು ಗ್ರಂಥಾಲಯದ ಸಮಯ ವಿಸ್ತರಣೆಗೆ ಮನವಿ ಮಾಡಿದ್ದರು. ಅವರ ಅನುಕೂಲಕ್ಕೆ ಸಮಯ ವಿಸ್ತರಿಸಲಾಗಿದೆ
ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ
ಹಗಲಿನಲ್ಲಿ ಉದ್ಯೋಗದಲ್ಲೇ ಸಮಯ ಕಳೆದು ಹೋಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಕಷ್ಟ ಎಂದು ಭಾವಿಸಿದ್ದೆ. ಗ್ರಂಥಾಲಯವನ್ನು ತಡರಾತ್ರಿವರೆಗೂ ತೆರೆದಿಟ್ಟು ಜಿಲ್ಲಾಧಿಕಾರಿ ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ
ಸಂತೋಷ ಮಾನೆ, ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT