ಕಾರವಾರ: ‘ನಡುದಾರಿ ಗುಡ್ಡ’, ‘ಹೊಸಕಲ್ಲು’, ‘ಶಿವಾ ರಾಕ್’, ‘ಕುಡ್ಲೆ ರಾಕ್’, ‘ಕುಮಟಾ ರಾಕ್’...ಇವು ಸಿನಿಮಾಗಳ ಹೆಸರಲ್ಲ. ಜಿಲ್ಲೆಯ ವ್ಯಾಪ್ತಿಯಲ್ಲಿ ಅರಬ್ಬಿ ಸಮುದ್ರದಲ್ಲಿ ತಲತಲಾಂತರಗಳಿಂದಿರುವ ದ್ವೀಪಗಳಿಗೆ ಇಡಲು ನಿರ್ಧರಿಸಿದ ಹೆಸರುಗಳು.

ಸಮುದ್ರದ ನಡುವೆ ಇರುವ ಸಣ್ಣ ದ್ವೀಪಗಳಿಗೆ ನಾಮಕರಣ ಭಾಗ್ಯ ಒದಗಿಬಂದಿದೆ. ಕೇಂದ್ರ ಗೃಹ ಸಚಿವಾಲಯದ ಸೂಚನೆ ಆಧರಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ 24 ದ್ವೀಪಗಳಿಗೆ ಹೊಸ ಹೆಸರುಗಳನ್ನು ಸೂಚಿಸಿದೆ. ಆದರೆ, ಇನ್ನಷ್ಟೆ ಈ ಪ್ರಸ್ತಾವ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಕೆಯಾಗಬೇಕಾಗಿದೆ. ಸಚಿವಾಲಯದ ಅಧಿಕೃತ ಅಧಿಸೂಚನೆ ಹೊರಡಿಸಿದ ಬಳಿಕ ದಾಖಲೆಯಲ್ಲಿ ದ್ವೀಪಗಳು ಹೊಸ ಹೆಸರುಗಳಿಂದ ದಾಖಲಾಗಲಿವೆ.

ಜಿಲ್ಲೆಯ ಸಮುದ್ರ ವ್ಯಾಪ್ತಿಯಲ್ಲಿ 63 ದ್ವೀಪಗಳಿದ್ದು, ಅವುಗಳ ಪೈಕಿ 39 ದ್ವೀಪಗಳಿಗೆ ಈಗಾಗಲೆ ಹೆಸರುಗಳಿವೆ. ಉಳಿದ ಸಣ್ಣ ಗಾತ್ರದ ದ್ವೀಪಗಳಿಗೆ ಈವರೆಗೆ ಯಾವುದೇ ನಿರ್ದಿಷ್ಟ ಗುರುತು ಇರಲಿಲ್ಲ. ಹೊಸ ಹೆಸರು ಸೂಚಿಸುವ ಪ್ರಕ್ರಿಯೆ ಕೆಲ ತಿಂಗಳುಗಳಿಂದ ನಡೆಯುತ್ತಿತ್ತು.

‘ಸಮುದ್ರದಲ್ಲಿರುವ ಚಿಕ್ಕ ಗಾತ್ರದ ದ್ವೀಪಗಳಿಗೆ ಹೆಸರು ನಿಗದಿಪಡಿಸಿದರೆ ದಾಖಲೆಗಳಲ್ಲಿ, ಉಪಗ್ರಹ ಆಧಾರಿತ ನಕ್ಷೆಗಳಲ್ಲಿ ಸ್ಥಳ ಗುರುತು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಗೃಹ ಸಚಿವಾಲಯ 2015ರಲ್ಲಿ ಈವರೆಗೆ ಹೆಸರಿಲ್ಲದ ದ್ವೀಪಗಳಿಗೆ ನಾಮಕರಣ ಮಾಡಲು ಮುಂದಾಗಿತ್ತು. 11 ವರ್ಷಗಳ ಹಿಂದೆ ಸಮೀಕ್ಷೆ ನಡೆಸಿ ದ್ವೀಪಗಳ ಪಟ್ಟಿ ಸಿದ್ಧಪಡಿಸಲಾಗಿತ್ತು. ಆಗ ಅವುಗಳ ಗುರುತಿಗೆ ವಿಶಿಷ್ಟ ಗುರುತಿನ ಸಂಖ್ಯೆ (ಯುಡಿಐಡಿ) ನೀಡಲಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕೂರ್ಮಗಡ, ದೇವಗಡ, ಬಸವರಾಜ ದುರ್ಗ, ನೇತ್ರಾಣಿ ಗುಡ್ಡ ಸೇರಿದಂತೆ ಹಲವು ದೊಡ್ಡ ದ್ವೀಪಗಳಿಗೆ ಹೆಸರುಗಳಿವೆ. ಅವುಗಳಿಗೆ ಪಹಣಿ ದಾಖಲೆಯೂ ಇದೆ. ಆದರೆ, ಉಳಿದ ಸಣ್ಣಪುಟ್ಟ ದ್ವೀಪಗಳಿಗೆ ಯಾವುದೇ ನಿರ್ದಿಷ್ಟ ದಾಖಲೆ ಇರಲಿಲ್ಲ. ಅವುಗಳ ವಿಸ್ತೀರ್ಣವೂ ಕೆಲವೇ ಚದರ ಮೀಟರ್ನಷ್ಟಿತ್ತು. ಕೆಲವು ದೊಡ್ಡ ಬಂಡೆಕಲ್ಲುಗಳಷ್ಟೇ ಇದ್ದವು. ಅಂತಹ ಸ್ಥಳಗಳಿಗೆ ಈವರೆಗೆ ಸ್ಥಳೀಯ ಮೀನುಗಾರರು ಆಡುಭಾಷೆಯಿಂದ ಕರೆಯುತ್ತಿದ್ದರು’ ಎಂದು ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ನಿಶ್ಚಲಕುಮಾರ ಎಂ. ತಿಳಿಸಿದರು.

‘ಕಡಲತೀರದಿಂದ 12 ನಾಟಿಕಲ್ ಮೈಲು ವ್ಯಾಪ್ತಿಯೊಳಗಿನ ನಡುಗಡ್ಡೆಗಳಲ್ಲಿ ಸುರಕ್ಷತೆಗೆ ನಿಗಾ ಇರಿಸುವ ಕೆಲಸವನ್ನು ಕರಾವಳಿ ಕಾವಲು ಪಡೆ ಮಾಡುತ್ತಿದೆ. ಗುರುತು ರಹಿತ ದ್ವೀಪಗಳಿಗೆ ನಾಮಕರಣವಾದರೆ ದಾಖಲೆ ನಿರ್ವಹಣೆಗೂ ಅನುಕೂಲವಾಗುತ್ತದೆ’ ಎಂದರು.

24 ದ್ವೀಪಗಳಿಗೆ ಹೊಸದಾಗಿ ಹೆಸರು ನಿಗದಿಪಡಿಸಲು ಜಿಲ್ಲಾಮಟ್ಟದ ಸಮಿತಿ ಕೈಗೊಂಡ ನಿರ್ಣಯದ ಪ್ರಸ್ತಾವವನ್ನು ಶೀಘ್ರದಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗುತ್ತದೆ
ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ

15 ದ್ವೀಪಗಳಿಗೆ ಗೋವಾ ಸಂಖ್ಯೆ!

2015ರಲ್ಲಿ ದ್ವೀಪಗಳ ಸಮೀಕ್ಷೆ ನಡೆಸಿದ್ದ ಕೇಂದ್ರ ಗೃಹ ಸಚಿವಾಲಯ ಪ್ರತಿ ದ್ವೀಪಕ್ಕೊಂದು ವಿಶಿಷ್ಟ ಗುರುತಿನ ಸಂಖ್ಯೆ (ಯುಡಿಐಡಿ) ನೀಡಿತ್ತು. ಜಿಲ್ಲೆಯ ವ್ಯಾಪ್ತಿಯ 64 ದ್ವೀಪಗಳ ಪೈಕಿ 15 ದ್ವೀಪಗಳು ಗೋವಾ ವ್ಯಾಪ್ತಿಗೆ ಸೇರಿರಬಹುದು ಎಂದು ಆ ರಾಜ್ಯದ ಗುರುತಿನ ಸಂಖ್ಯೆ ನೀಡಲಾಗಿತ್ತು. ಅವುಗಳೆಲ್ಲವೂ ಕಾರವಾರಕ್ಕೆ ಸಮೀಪದಲ್ಲಿರುವ ದ್ವೀಪಗಳಾಗಿವೆ. ‘ಗೋವಾ ರಾಜ್ಯದ ವಿಶಿಷ್ಟ ಗುರುತಿನ ಸಂಖ್ಯೆ ಒಳಗೊಂಡಿರುವ ದ್ವೀಪಗಳಿಗೆ ಕರ್ನಾಟಕದ ಸಂಖ್ಯೆ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಗೋವಾ ಸರ್ಕಾರದೊಂದಿಗೂ ಪತ್ರ ವ್ಯವಹಾರ ನಡೆಸಿದ್ದು ಅವರು ಒದಕ್ಕೆ ಸಮ್ಮತಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.