ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಮುಗಳಿ ಕಡಲತೀರದಲ್ಲಿ ಎರಡು ತಿಮಿಂಗಿಲಗಳ ಕಳೆಬರ ಪತ್ತೆ

ಕಳೆದ ವಾರ 35 ಮೀ ಉದ್ದದ ಗಂಡು ತಿಮಿಂಗಿಲದ ಕಳೆಬರ ಪತ್ತೆಯಾಗಿತ್ತು
Published 16 ಸೆಪ್ಟೆಂಬರ್ 2023, 9:14 IST
Last Updated 16 ಸೆಪ್ಟೆಂಬರ್ 2023, 9:14 IST
ಅಕ್ಷರ ಗಾತ್ರ

ಕಾರವಾರ: ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮ ಪ್ರದೇಶದಲ್ಲಿ ಶನಿವಾರ ಎರಡು ಬಲೀನ್ ತಿಮಿಂಗಿಲಗಳ ಕಳೆಬರ ಪತ್ತೆಯಾಗಿದೆ.

ಕಳೆದ ವಾರ 35 ಮೀ ಉದ್ದದ ಗಂಡು ತಿಮಿಂಗಿಲದ ಕಳೆಬರ ಪತ್ತೆಯಾಗಿತ್ತು. ಈಗ ಅದೇ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ಅಂದಾಜು 25 ಮೀ. ಉದ್ದದ ಹೆಣ್ಣು ತಿಮಿಂಗಿಲದ ಕಳೆಬರ ಪತ್ತೆಯಾಗಿದೆ. ಈ ಕಳೆಬರ ಸಿಕ್ಕ ಜಾಗದ 700 ಮೀ. ದೂರದಲ್ಲಿ ಮರಿಯೊಂದರ ಕಳೆಬರ ದೊರೆತಿದೆ.

'ಬಲೀನ್ ತಿಮಿಂಗಿಲಗಳ ಸಂತಾನೋತ್ಪತ್ತಿಯ ಅವಧಿ ಇದಾಗಿದ್ದು ಶೀತವಲಯದಿಂದ ನೇತ್ರಾಣಿ, ಮುಗಳಿ ಕಡಲತೀರಕ್ಕೆ ಸಮೀಪಕ್ಕೆ ಬರುತ್ತವೆ. ಹೀಗೆ ಬರುವ ವೇಳೆ ತಿಮಿಂಗಿಲಗಳಿಗೆ ಹಡಗು ಡಿಕ್ಕಿಯಾಗಿ ಮೃತಪಟ್ಟಿರುವ ಸಾಧ್ಯತೆ ಇದೆ' ಎಂದು ಕಡಲಜೀವಶಾಸ್ತ್ರ ತಜ್ಞ ಪ್ರಕಾಶ ಮೇಸ್ತ ಹೇಳಿದರು.

'ತಿಮಿಂಗಿಲದ ಕಳೆಬರ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಕಡಲಜೀವಶಾಸ್ತ್ರ ಅಧ್ಯಯನ ಕೇಂದ್ರದ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಬಹುದು' ಎಂದು ಸ್ಥಳೀಯ ಅರಣ್ಯ ಸಿಬ್ಬಂದಿ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT