ಕುಮಟಾ: ವ್ಯಾಪಾರ ಸಂಕೀರ್ಣದ ಸಾಮಗ್ರಿ ಸಾಗಿಸುವ ಲಿಫ್ಟ್‌ನಲ್ಲಿ ಸಿಲುಕಿ ಕೆಲಸಗಾರನೊಬ್ಬ ಮೃತಪಟ್ಟ ಘಟನೆ ಪಟ್ಟಣದ ಸುಭಾಸ್ ರಸ್ತೆಯ ಜಗದಂಬಾ ಎಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ಬುಧವಾರ ಸಂಭವಿಸಿದೆ.
ರಾಜಸ್ತಾನ ಜೋಧಪುರ ಜಿಲ್ಲೆಯ ಗೋಪಾಲ ಸಿಂಗ್ (24) ಮೃತ ವ್ಯಕ್ತಿ. ಈತ ಗ್ರಾಹಕರಿಗೆ ಬೇಕಾದ ಸಾಮಗ್ರಿ ತರಲು ಮಳಿಗೆಯ ಮಹಡಿಗೆ ಹೋಗಿ ವಾಪಸ್ ಲಿಫ್ಟ್ ನಲ್ಲಿ ಬರುವಾಗ ದುರಂತ ಸಂಭವಿಸಿದೆ.
ಮುನ್ನೆಚ್ಚರಿಕೆ ಕ್ರಮ ವಹಿಸದೇ ಅಪೂರ್ಣವಾಗಿರುವ ಲಿಫ್ಟ್‌ನಲ್ಲಿ ಸಾಮಗ್ರಿ ಸಾಗಿಸಲು ಸೂಚಿಸಿದ್ದ ಮಳಿಗೆ ಮಾಲೀಕ ನರೇಂದ್ರ ಸಿಂಗ್ ರಾಥೋಡ (34) ಹಾಗೂ ಅವರ ಸಹೋದರ ಲಕ್ಷ್ಮಣ ಸಿಂಗ್ ರಾಥೋಡ್ (29) ವಿರುದ್ಧ ಕುಮಟಾ ಪಿ.ಎಸ್.ಐ ಮಂಜುನಾಥ ಗೌಡರ ಪ್ರಕರಣ ದಾಖಲಿಸಿದ್ದಾರೆ.