ಮೆಟಲಾಕ್ಸಿಲ್ 35 ಡಬ್ಲೂ.ಎಸ್ 1 ಗ್ರಾಂ/ ಮೆಟಲಾಕ್ಸಿಲ್ ಎಂ.ಜೆಡ್+ ಮ್ಯಾಂಕೋಜೆಬ್ ಇರುವ ಶಿಲೀಂದ್ರನಾಶಕವನ್ನು 2 ಗ್ರಾಂ ಪ್ರತಿ ಲೀಟರ್ ನೀರಿನ ಜತೆ ಅಂಟು ದ್ರಾವಣ 1 ಮಿಲೀ ಪ್ರತಿ ಲೀ. ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು
ಗಣೇಶ ಹೆಗಡೆ ತೋಟಗಾರಿಕಾ ಇಲಾಖೆ ಅಧಿಕಾರಿ
ರೋಗ ಬಂದರೆ ಇಡೀ ಬಳ್ಳಿ ನಾಶ
ಸೊರಗು ರೋಗ ಬಂದ ಬಳ್ಳಿಯ ಮೃದುಕಾಂಡ ಕುಡಿ ಎಲೆಗಳು ಕಪ್ಪು ವರ್ಣಕ್ಕೆ ತಿರುಗುತ್ತವೆ. ಬಳ್ಳಿಗಳಲ್ಲಿ ರೋಗವು ಪೂರ್ತಿ ವ್ಯಾಪಿಸಿ ಬಳ್ಳಿ ನಾಶವಾಗುತ್ತದೆ. ಮುಖ್ಯಕಾಂಡದ ನೆಲಮಟ್ಟ ಅಥವಾ ಕುತ್ತಿಗೆ ಭಾಗದಲ್ಲಿ ರೋಗ ಬಾಧಿಸಿದಲ್ಲಿ ಪೂರ್ತಿ ಬಳ್ಳಿ ಸೊರಗಿ ಒಣಗುತ್ತದೆ. ಪೋಷಕಾಂಶಗಳನ್ನು ಹೀರಿಕೊಳ್ಳುವ ಬೇರಿನ ಭಾಗಗಳಿಗೆ ರೋಗ ತಗುಲಿದಲ್ಲಿ ಮಳೆಯ ತೇವಾಂಶದಿಂದ ಬಳ್ಳಿಗಳ ಎಲೆಗಳು ಹಳದಿ ವರ್ಣಕ್ಕೆ ತಿರುಗಿ ಬಾಡಿ ಉದುರಿ ಹೋಗುತ್ತವೆ. ಈ ಹಂತದಲ್ಲಿ ಔಷಧಿಯೂ ಪ್ರಯೋಜನ ನೀಡದು. ಪೂರ್ತಿ ಬಳ್ಳಿ ಒಂದು ಇಲ್ಲವೇ ಒಂದೂವರೆ ತಿಂಗಳಲ್ಲಿ ಸಾಯುತ್ತದೆ ಎಂಬುದು ಬೆಳೆಗಾರರ ಆತಂಕದ ಮಾತಾಗಿದೆ.