ಮುಂಡಗೋಡ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ತೆರೆದಿರುವ ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಕಾರ್ಯ ತೀವ್ರಗೊಂಡಿದೆ. ಸನವಳ್ಳಿ, ಬಾಚಣಕಿ ಹಾಗೂ ಅಗಡಿ ಗ್ರಾಮಗಳ ಸನಿಹ ಈಗಾಗಲೇ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ತಾಲ್ಲೂಕಿನ ಗಡಿ ಪ್ರವೇಶಿಸುವ ಹಾಗೂ ಹೊರ ಹೋಗುವ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.

ಹಶೀಲ್ದಾರ್ ಶಂಕರ ಗೌಡಿ ಗುರುವಾರ ಸನವಳ್ಳಿ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ‘ಸಂಶಯ ಕಂಡುಬಂದರೆ ಹೆಚ್ಚಿನ ನಿಗಾ ವಹಿಸಬೇಕು. ಸಮರ್ಪಕವಾಗಿ ತಪಾಸಣಾ ಕಾರ್ಯ ಕೈಗೊಳ್ಳಬೇಕು’ ಎಂದು ಸಿಬ್ಬಂದಿಗೆ ಸೂಚಿಸಿದರು.

ಚೆಕ್‌ಪೋಸ್ಟ‌್ ಬಳಿ ಕ್ಯಾಬಿನ್ ಕಂಟೇನರ್‌ಗಳು ಇಲ್ಲದಿರುವುದು ಸಿಬ್ಬಂದಿಗೆ ತೊಂದರೆಯಾಗಿದೆ. ಕೆಲಕಡೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಳವಡಿಸಿದ್ದ ಕ್ಯಾಬಿನ್ ಕಂಟೇನರ್‌ಗಳಿದ್ದು, ಬಿಸಿಲಿಗೆ ಆಶ್ರಯ ಒದಗಿಸುತ್ತಿವೆ. ‘ಸನವಳ್ಳಿ ಚೆಕ್‌ಪೋಸ್ಟ್‌ನಲ್ಲಿ ಅರಣ್ಯ ಇಲಾಖೆಯ ಮನೆಯಿದ್ದು, ಅದನ್ನು ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಬಳಸಲು ಅವಕಾಶ ಮಾಡಿಕೊಟ್ಟರೆ ಅನುಕೂಲವಾಗುತ್ತದೆ’ ಎನ್ನುವುದು ಸಿಬ್ಬಂದಿಯ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.