ಮುಂಡಗೋಡ: ಪಟ್ಟಣದ ಮಾರಿಕಾಂಬಾ ದೇವಿ ಜಾತ್ರೆಯ ನಾಲ್ಕನೇ ದಿನ ಶುಕ್ರವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹಣ್ಣುಕಾಯಿ, ಉಡಿ ಸೇವೆ ಸಮರ್ಪಿಸಿದರು.

ವಿಶೇಷ ಹೂವುಗಳಿಂದ ಅಲಂಕೃತಗೊಂಡಿದ್ದ ದೇವಿ ಗದ್ದುಗೆಗೆ, ಬೆಳಿಗ್ಗೆಯಿಂದಲೇ ಭಕ್ತರು ತಂಡೋಪತಂಡವಾಗಿ ಆಗಮಿಸಿದರು. ಸಮಯ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಳಗೊಂಡು, ಜಾತ್ರಾ ಗದ್ದುಗೆಯ ಆವರಣದಲ್ಲಿ, ಬಿಸಿಲಿನಲ್ಲಿ ಭಕ್ತರ ಸರದಿ ಕಂಡುಬಂತು.

ವಿಶೇಷ ಪೂಜೆ ಸಲ್ಲಿಸುವರು, ಗಣ್ಯ ವ್ಯಕ್ತಿಗಳು ದೇವಿಯ ಎದುರಿಗೆ ತುಸು ಹೊತ್ತು ನಿಲ್ಲುತ್ತಿದ್ದರಿಂದ, ಸಾಮಾನ್ಯ ಸಾಲಿನಲ್ಲಿ ನಿಂತಿದ್ದ ಭಕ್ತರು, ದೇವಿಯ ದರ್ಶನಕ್ಕೆ ಕಾಯಬೇಕಾಯಿತು. ಸರದಿ ಸಾಲಿನ ಹೊರತಾಗಿಯೂ, ದೇವಿಯ ಎದುರಿನ ಜಾಗವೂ, ಭಕ್ತರಿಂದ ತುಂಬಿ ತುಳುಕುತ್ತಿತ್ತು. ದೇವಸ್ಥಾನ ಹಾಗೂ ಜಾತ್ರಾ ಕಮೀಟಿ ಸದಸ್ಯರು, ಭಕ್ತರಿಗೆ ಅನಾನುಕೂಲವಾಗದಂತೆ, ಆಯಕಟ್ಟಿನ ಜಾಗದಲ್ಲಿ ನಿಂತು ದೇವಿಯ ದರ್ಶನಕ್ಕೆ ಅನುಕೂಲ ಮಾಡಿಕೊಡುತ್ತಿರುವುದು ಕಂಡುಬಂತು. ಮಧ್ಯಾಹ್ನದವರೆಗೂ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಜಾತ್ರಾ ಗದ್ದುಗೆಯ ಎದುರಿಗೆ ಇರುವ ಅಕ್ಷಯ ಮಂಟಪದಲ್ಲಿಯೂ ಸಹ ‘ಅನ್ನದಾನ’ ಮಾಡುವ ಭಕ್ತರು ಹೆಚ್ಚಿದ್ದರು. ತಿಮ್ಮಪ್ಪನ ಪಾದದಡಿ ಬೀಳುವ ಅಕ್ಕಿಯನ್ನು ಭಕ್ತರು ಕಣ್ತುಂಬಿಕೊಂಡು, ನಮಿಸಿದರು. ಅಲಂಕೃತ ಮಂಟಪದಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಿರುವ ಅಕ್ಷಯ ಮಂಟಪ ಭಕ್ತರನ್ನು ಆಕರ್ಷಿಸುತ್ತಿದೆ.

ರಥೋತ್ಸವದ ಮಾರನೇ ದಿನವಾದ ಗುರುವಾರ ಭಕ್ತರು ‘ಪರ್ವ‘ ಆಚರಿಸಿದ ಹಿನ್ನೆಲೆಯಲ್ಲಿ, ಪಕ್ಕದ ಜಿಲ್ಲೆಗಳಿಂದ ಸಂಬಂಧಿಕರು ಊರಜಾತ್ರೆಗೆ ಆಗಮಿಸಿದ್ದರು. ಇದರಿಂದ ಪಟ್ಟಣದ ತುಂಬ ಜನರ ದಂಡೇ ಕಾಣುತ್ತಿತ್ತು. ಪಟ್ಟಣದ ಪ್ರಮುಖ ರಸ್ತೆಗಳು ವಾಹನಗಳಿಂದ ತುಂಬಿ ತುಳುಕಿದ್ದವು. ರಾತ್ರಿ 9 ಗಂಟೆ ಸುಮಾರಿಗೆ ಶಿವಾಜಿ ವೃತ್ತದಲ್ಲಿ ವಾಹನಗಳು ಮುಂದೆ ಚಲಿಸಲು ಆಗದಂತೆ, ಟ್ರಾಫಿಕ್ ಸಮಸ್ಯೆ ಆಗಿತ್ತು. ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿಯೇ ಇದ್ದು, ವಾಹನಗಳ ಸುಗಮ ಸಂಚಾರಕ್ಕೆ ಶ್ರಮಿಸಿದರು.

ಪೊಲೀಸರ ಜೊತೆ ಸ್ಥಳೀಯ ಯುವಕರೂ ಸಾಥ್ ನೀಡಿ, ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ತರುವಲ್ಲಿ ಕೈಜೋಡಿಸಿದರು. ಜಾತ್ರಾ ಮಳಿಗೆಗಳಲ್ಲಿ ಇದ್ದ ಜನರ ಸಂಖ್ಯೆಗಿಂತ, ಅಮ್ಯುಸ್ಮೆಂಟ್ ಸ್ಥಳದಲ್ಲಿ ಕಿಕ್ಕಿರಿದ ಜನಸಂದಣಿ ಇತ್ತು. ರಥಬೀದಿಯಲ್ಲಿಯೂ ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ, ಮುಂದೆ ಚಲಿಸಲು ಪರದಾಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.