ಜೊಯಿಡಾ: ಶೈಕ್ಷಣಿಕ ಹಾಗೂ ವೈವಿದ್ಯಮಯ ಪಠ್ಯೇತರ ಚಟುವಟಿಕೆಗಳ ಮೂಲಕ ಉತ್ತಮ ಮಾದರಿ ಶಾಲೆಯಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೊಂದಿಗೆ ಸೃಜನಶೀಲ ಚಟುವಟಿಕೆಗಳ ಮೂಲಕ ತಾಲ್ಲೂಕಿನ ಕೊಂದರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂದು ರಾಜ್ಯದ ಗಮನ ಸೆಳೆಯುತ್ತಿದೆ.

ಜೊಯಿಡಾ: ತಾಲ್ಲೂಕಿನ ಕುಂಬಾರವಾಡ– ಉಳವಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕೊಂದರ ಶಾಲೆ, ಶಿಕ್ಷಣದೊಂದಿಗೆ ಔಷಧೀಯ ಸಸ್ಯಗಳಿಗೂ ಪ್ರಸಿದ್ಧ. 50ಕ್ಕೂ ಅಧಿಕ ಗಿಡಮೂಲಿಕೆಗಳನ್ನು ಇಲ್ಲಿ ಬೆಳೆಸಿ, ಮಕ್ಕಳಿಗೆ ಪರಿಸರ ಪಾಠವನ್ನೂ ಹೇಳಿ ಕೊಡಲಾಗುತ್ತಿದೆ.

ಶಾಲಾ ಆವರಣದಲ್ಲಿರುವ ವಿವಿಧ ಔಷಧೀಯಸಸ್ಯಗಳು,ಬೇರೆಬೇರೆ ರೀತಿಯಇತರ ಸಸ್ಯಗಳು ಗಮನ ಸೆಳೆಯುತ್ತವೆ. ಜೊತೆಗೇಪ್ಲಾಸ್ಟಿಕ್ ಬಾಟಲಿಗಳು, ರಬ್ಬರ್ ಟೈರ್‌ಗಳನ್ನು ಮರುಬಳಕೆ ಮಾಡುವ ಬಗ್ಗೆಯೂ ಮಕ್ಕಳಿಗೆ ತಿಳಿ ಹೇಳಲಾಗುತ್ತಿದೆ. ವಿದ್ಯಾರ್ಥಿಗಳುಪ್ಲಾಸ್ಟಿಕ್ ಬಾಟಲಿಗಳಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ.

ಶಾಲೆಯ ಅಂಗಳದಲ್ಲಿಯೇ ತರಕಾರಿಯನ್ನೂಬೆಳೆಸಲಾಗಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ಅದನ್ನೇ ಬಳಸಲಾಗುತ್ತದೆ. ಶಾಲೆಯ ಮಕ್ಕಳಲ್ಲಿ ಪರಿಸರ, ಕಾಡು, ಸಂಸ್ಕೃತಿಯನ್ನು ಕಾಪಾಡುವ ಅರಿವು ಮೂಡಿಸಲಾಗುತ್ತಿದೆ.

ಈಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ, ಮೂರು ಕೋಠಡಿಗಳು ಸೇರಿದಂತೆ ಎಲ್ಲ ಮೂಲಸೌಲಭ್ಯಗಳಿವೆ.ಈ ಶಾಲೆಗೆ 2018–19ನೇಸಾಲಿನ ‘ಕಲಿ–ನಲಿ ಉತ್ತಮ ಶಾಲೆ ಪ್ರಶಸ್ತಿ’ಪ್ರದಾನವಾಗಿದೆ.

1948ರಲ್ಲಿ ಆರಂಭ:1948ರಲ್ಲಿ ಬಾಲಚಂದ್ರ ಹರ್ಚಿಲಕರ ಅವರು ಗುರುಕುಲ ಮಾದರಿಯಲ್ಲಿ ಎಂಟು ಮಕ್ಕಳೊಂದಿಗೆ ಈ ಶಾಲೆಯನ್ನು ಆರಂಭಿಸಿದರು.1965ರಲ್ಲಿ ಸರ್ಕಾರಿ ಮರಾಠಿ ಮಾಧ್ಯಮ ಶಾಲೆಯಾಗಿ ರೂಪುಗೊಂಡಿತು.1998ರಿಂದ ಕನ್ನಡ ಮಾಧ್ಯಮ ಶಾಲೆಯಾಯಿತು. ಪ್ರಸ್ತುತ25 ವಿದ್ಯಾರ್ಥಿಗಳಿದ್ದು, ಅವರಲ್ಲಿ15 ಗಂಡು ಹಾಗೂ 10 ಹೆಣ್ಣು ಮಕ್ಕಳು ಇದ್ದಾರೆ. ಇಬ್ಬರು ಶಿಕ್ಷಕರು ಈ ಶಾಲೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.