ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಬಂದಿರುವುದು ರಾಜಕಾರಣ ಮಾಡಲು, ಸಮಾಜ ಸೇವೆಗಲ್ಲ: ಅನಂತಕುಮಾರ ಹೆಗಡೆ

ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿಕೆ
Last Updated 11 ಅಕ್ಟೋಬರ್ 2018, 6:56 IST
ಅಕ್ಷರ ಗಾತ್ರ

ಶಿರಸಿ: ನಾವು ಈ ಜಾಗದಲ್ಲಿ ಬಂದು ಕುಳಿತಿದ್ದೇ ರಾಜಕಾರಣ ಮಾಡಲಿಕ್ಕೆ. ಸಮಾಜ ಸೇವೆ ಮಾಡಲು ಈ ಕುರ್ಚಿಯ ಮೇಲೆ ಬಂದು ಕುಳಿತಿಲ್ಲ ಎಂದುಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಇಲ್ಲಿ ಆಯೋಜಿಸಿರುವ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ನಾನು ರಾಜಕಾರಣ ಮಾಡಲು ಬಂದಿರುವುದು. ನನ್ನ ಈ ಹೇಳಿಕೆಯನ್ನು ಮಾಧ್ಯಮದವರುಹೇಗೆ ಬೇಕಾದರೂ ಬರೆಯಲಿ. ಅದು ಅವರವರ ಭಾವಕ್ಕೆ ಅವರವರ ಭಕುತಿಗೆ ಎಂದು ಹೇಳಿದರು.

ಜನೌಷಧ ಕೇಂದ್ರ ಉದ್ಘಾಟನೆ:
ಶಿರಸಿಯಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭವಾಗಿರುವ ಜನೌಷಧ ಕೇಂದ್ರವನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸಿದರು.

ಜಿಲ್ಲೆಯಾದ್ಯಂತ ಆರಂಭಿಸಿರುವ ಪ್ರಧಾನ ಮಂತ್ರಿ ಡಯಾಲಿಸಿಸ್ ಯೋಜನೆಯಿಂದಾಗಿ ಕಿಡ್ನಿ ವೈಫಲ್ಯ ಎದುರಿಸುತ್ತಿರುವ ರೋಗಿಗಳು ಮರು ಜೀವ ಪಡೆಯುವಂತಾಗಿದೆ ಎಂದರು.

ಜಿಲ್ಲೆಯಾದ್ಯಂತ ಆರಂಭಿಸಿರುವ ಪ್ರಧಾನ ಮಂತ್ರಿ ಡಯಾಲಿಸಿಸ್ ಯೋಜನೆಯಿಂದಾಗಿ ಕಿಡ್ನಿ ವೈಫಲ್ಯ ಎದುರಿಸುತ್ತಿರುವ ರೋಗಿಗಳು ಮರು ಜೀವ ಪಡೆಯುವಂತಾಗಿದೆ ಎಂದರು.

ಜನೌಷಧ ಕೇಂದ್ರ ಉದ್ಘಾಟಿಸಿದ ಅನಂತ ಕುಮಾರ ಹೆಗಡೆ
ಜನೌಷಧ ಕೇಂದ್ರ ಉದ್ಘಾಟಿಸಿದ ಅನಂತ ಕುಮಾರ ಹೆಗಡೆ

ನಿಯಮದಂತೆ ವೈದ್ಯರು ರೋಗಿಗಳಿಗೆ ಔಷಧ ಬರೆದು ಕೊಡುವಾಗ ಕಂಪನಿಯ ಹೆಸರು ಬರೆದುಕೊಡುವಂತಿಲ್ಲ. ಆದರೆ, ವೈದ್ಯರು ಮತ್ತು ಕಂಪನಿಯ ನಡುವಿನ ಹೊಂದಾಣಿಕೆಯಿಂದ ವೈದ್ಯರು ಔಷಧದ ಹೆಸರಿನ ಜೊತೆಗೆ ಕಂಪನಿ ಹೆಸರು ಉಲ್ಲೇಖಿಸುತ್ತಾರೆ. ಕೆಲವರು ಔಷಧ ಖರೀದಿಸಿದ ಮೇಲೆ ತಂದು ತೋರಿಸುವಂತೆ ರೋಗಿಗಳಿಗೆ ತಿಳಿಸುತ್ತಾರೆ ಎಂದು ಆರೋಪಿಸಿದರು.

ದೇಶಕ್ಕೆ ಹೊಂದಾಣಿಕೆಯಾಗುವ ಔಷಧ ಕಂಡುಹಿಡಿಯುವ ಪ್ರಯತ್ನ ನಡೆಯಲೇ ಇಲ್ಲ.‌ಇದರ ಹಿಂದೆ ದೊಡ್ಡ ಲಾಬಿ ಕೆಲಸ ಮಾಡುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT