ಸಿದ್ದಾಪುರ: ‘ಜಿಲ್ಲೆಯ ಅತಿಕ್ರಮಣದಾರರ ಮತ ಪಡೆದು ಭಾರಿ ಬಹುಮತದಿಂದ ಆಯ್ಕೆಯಾದ ಸಂಸದರು ಸಂಸತ್ತಿನಲ್ಲಿ ಅತಿಕ್ರಮಣದಾರರ ಪರವಾಗಿ ಧ್ವನಿ ಎತ್ತಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲ್ಲೂಕಿನಲ್ಲಿ ₹ 12.22 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಸೋಮವಾರ ಅವರು ಮಾತನಾಡಿದರು. ಬಡವರಿಗೆ ಭೂಮಿ ಕೊಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಹೊರತು ರಾಜ್ಯ ಸರ್ಕಾರದ್ದಲ್ಲ. ಬಿಜೆಪಿಯವರು ನಮ್ಮ ಮೇಲೆ ಗೂಬೆ ಕೂರಿಸುವ ಬದಲು ಕೇಂದ್ರದಲ್ಲಿ ಗಟ್ಟಿ ಧ್ವನಿ ಎತ್ತಿ ಬಡವರಿಗೆ ಭೂಮಿ ಕೊಡಿಸಲು ಮುಂದಾಗಬೇಕು.

ಅಡಿಕೆ ಬೆಳೆಗಾರರಿಗೆ ಬಿಟ್ಟ ಬೆಟ್ಟ ಭೂಮಿ 2012ರಲ್ಲೇ ಬ ಖರಾಬ್ ಆಗಿದೆ. ಅಂದು ನಿಮ್ಮದೇ ಸರ್ಕಾರ, ನಿಮ್ಮವರೇ ಶಾಸಕರಾಗಿದ್ದರು. ಆವಾಗ ಏನು ಮಾಡದೇ ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸಂಸದರಿಗೂ ಜವಾಬ್ದಾರಲ್ಲವೇ? ಎಂದು ಪ್ರಶ್ನಿಸಿದರು.

ತಾಲ್ಲೂಕಿನ ಹಸರಗೋಡ ಗ್ರಾ.ಪಂ. ವ್ಯಾಪ್ತಿಯ ಅಡಕಳ್ಳಿ-ತಟ್ಟಿಕೈ ಮುಖ್ಯ ರಸ್ತೆಯ ಗೋಳಿಕಟ್ಟಾ ಶಾಲೆಯ ಕ್ರಾಸ್ ನಿಂದ ದೋಣಿಸಾಲುವರೆಗೆ ರಸ್ತೆ ನಿರ್ಮಾಣ ಕಾಮಗಾರಿ, ತಾಲ್ಲೂಕಿನ ಸೊಂಗೆಮನೆ ಉಂಚಳ್ಳಿ ಫಾಲ್ಸ್ ರಾಜ್ಯ ಹೆದ್ದಾರಿ 145ರ ರಸ್ತೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿ, ಸೋವಿನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಮಳ್ಳಿಕೈ ಸೇತುವೆ ಮತ್ತು ರಸ್ತೆ ಕಾಮಗಾರಿ, ವಾಜಗೋಡ ಗ್ರಾ.ಪಂನ ಮಾಸ್ತಿಹಕ್ಕಲು ಹತ್ತಿರ ಹಳ್ಳಕ್ಕೆ ಸೇತುವೆ ಸಹಿತ ಬಾಂದಾರ ನಿರ್ಮಾಣ, ಮನಮನೆ ಗ್ರಾಮ ಪಂಚಾಯಿತಿಯ ಶಶಿಮಠದಲ್ಲಿ ಸೇತುವೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಕ್ಷದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.