ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಹೆಸರಡಿ ಸಿಎಂ ಹುದ್ದೆಯಲ್ಲಿ ಮುಂದುವರಿಯಬೇಡಿ: ಸಂಸದ ಕಾಗೇರಿ

Published 17 ಜೂನ್ 2024, 7:31 IST
Last Updated 17 ಜೂನ್ 2024, 7:31 IST
ಅಕ್ಷರ ಗಾತ್ರ

ಶಿರಸಿ: ರಾಜ್ಯದಲ್ಲಿ ಅಸಮರ್ಥ ಆಡಳಿತ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜಿ.ಪರಮೇಶ್ವರ ಅವರ ನೇತೃತ್ವ ಒಪ್ಪಿಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಆಯೋಜಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಬೆಲೆ ಏರಿಕೆ, ಅಲ್ಪಸಂಖ್ಯಾತರ ತುಷ್ಟೀಕರಣ, ಅಪರಾಧ ಕೃತ್ಯಗಳ ಹೆಚ್ಚಳ, ಮಿತಿಮೀರಿದ ಭ್ರಷ್ಟಾಚಾರ ಸೇರಿ ಹಲವು ವಿಷಯಗಳ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಸೇರಿ ಮುಂಬರುವ ಚುನಾವಣೆ ಖರ್ಚುವೆಚ್ಛ ನಿರ್ವಹಿಸಲು ಕಾಂಗ್ರೆಸ್ ರಾಜ್ಯವನ್ನು ಎಟಿಎಂ ಆಗಿ ಮಾರ್ಪಡಿಸಿಕೊಳ್ಳಲಾಗಿದೆ.

ಇದರ ಭಾಗವಾಗಿ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಸಿದ್ದಾರೆ ಎಂದ ಅವರು, 'ಕೇವಲ ಗ್ಯಾರಂಟಿ ಹೆಸರು ಮುಂದಿಟ್ಟುಕೊಂಡು ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಮುಂದುವರಿಯಬಾರದು. ತಕ್ಷಣ ರಾಜೀನಾಮೆ ನೀಡಿ ಜಿ.ಪರಮೇಶ್ವರ ಅವರಂಥ ನಾಯಕತ್ವ ಒಪ್ಪಿಕೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT