ಕಾರವಾರ: ಜಿಲ್ಲೆಯ ಕಡಲತೀರದಲ್ಲೀಗ ರಾತ್ರಿ, ನಸುಕಿನ ಜಾವ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಹೆಚ್ಚಿದೆ. ಕತ್ತಲು ಕವಿಯುತ್ತಿದ್ದಂತೆ ದಡಕ್ಕೆ ಧಾವಿಸಿ ಬಂದು ಮೊಟ್ಟೆ ಇಡುವ ಆಲಿವ್ ರಿಡ್ಲೆ ತಳಿಯ ಕಡಲಾಮೆಗಳ ಮೇಲೆ ನಿಗಾ ಇಡುವ ಕೆಲಸ ಸಾಗಿದೆ.

ನವೆಂಬರ್ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯ ಆಯ್ದ ಕಡಲತೀರಗಳಲ್ಲಿ ಆಲಿವ್ ರಿಡ್ಲೆಗಳ ಹೆರಿಗೆ ಶುರುವಾಗುತ್ತದೆ. ಹೊನ್ನಾವರ ವಿಭಾಗದ ಕಡಲತೀರಗಳಲ್ಲಿ, ಕಾರವಾರದ ಮಾಜಾಳಿ ಭಾಗದಲ್ಲಿ ಮೊಟ್ಟೆ ಇಡುವ ಪ್ರಮಾಣ ಹೆಚ್ಚಿದೆ. ಏಪ್ರಿಲ್ ತಿಂಗಳು ಮುಗಿಯುವವರೆಗೂ ಅಳಿವಿನಂಚಿನಲ್ಲಿರುವ ಈ ತಳಿಯ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಣೆ ಮಾಡುವ ಕೆಲಸ ನಡೆಯುತ್ತದೆ. ಸದ್ಯ ಜಿಲ್ಲೆಯ ಮಂಜಗುಣಿ, ಬಾವಳ, ಧಾರೇಶ್ವರ ಭಾಗದಲ್ಲಿ ನೂರಾರು ಮೊಟ್ಟೆಗಳನ್ನು ಕಡಲಾಮೆಗಳು ಇರಿಸಿ ಹೋಗಿವೆ.

ಕಡಲಾಮೆಗಳ ಮೊಟ್ಟೆ ಸಂರಕ್ಷಣೆ ಸಲುವಾಗಿ ಜಾಗೃತಿ ಮೂಡಿಸುವ ಜೊತೆಗೆ ಎಚ್ಚರವಹಿಸಲು ಕಡಲತೀರಗಳಲ್ಲಿ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗವು ಮಾಹಿತಿ ಫಲಕಗಳನ್ನು ಅಳವಡಿಸುತ್ತಿದೆ. ಇಲ್ಲಿನ ಟ್ಯಾಗೋರ್ ಕಡಲತೀರ, ದೇವಬಾಗ, ಮಾಜಾಳಿ ಕಡಲತೀರಗಳಲ್ಲಿ ಜಾಗೃತಿ ಫಲಕಗಳು ಕಾಣಸಿಗುತ್ತಿವೆ.

‘ಕಡಲಾಮೆಗಳು ರಾತ್ರಿ ವೇಳೆ ಅಥವಾ ನಸುಕಿನ ಜಾವ ತೀರ ಪ್ರದೇಶಕ್ಕೆ ಬಂದು ಮೊಟ್ಟೆ ಇಡುತ್ತವೆ. ಅವುಗಳ ಮೊಟ್ಟೆ ನಾಯಿ, ನರಿ ಸೇರಿದಂತೆ ಪ್ರಾಣಿಗಳ ಪಾಲಾಗದಂತೆ ನಿಗಾ ಇರಿಸಲು ರಾತ್ರಿ ಗಸ್ತು ತಿರುಗಲಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿಯನ್ನು ಪಾಳಿ ಆಧಾರದಲ್ಲಿ ನಿಯೋಜಿಸಿದ್ದೇವೆ’ ಎನ್ನುತ್ತಾರೆ ಕೋಸ್ಟಲ್ ಮರೈನ್ ವಿಭಾಗದ ಆರ್ಎಫ್ಒ ಕಿರಣ್ ಮನವಾಚಾರಿ.

‘ಈ ಭಾಗದಲ್ಲಿ ಕಡಲಾಮೆಗಳಲ್ಲಿ ಮೂರು ಪ್ರಬೇಧಗಳಿದ್ದರೂ ಆಲಿವ್ ರಿಡ್ಲೆ ಮಾತ್ರ ಕಡಲತೀರಕ್ಕೆ ಬಂದು ಮೊಟ್ಟೆ ಇಡುವ ಏಕೈಕ ಪ್ರಬೇಧ. ಜೆಲ್ಲಿ ಮೀನುಗಳು, ಹವಳಗಳ ಬೆಳವಣಿಗೆ ತಡೆಯುವ ಪಾಚಿಗಳನ್ನು (ಆಲ್ಗೆ) ತಿನ್ನುವ ಮೂಲಕ ಇವು ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತವೆ. ಹೀಗಾಗಿ, ಆಲಿವ್ ರಿಡ್ಲೆಯನ್ನು ಪರಿಸರ ವ್ಯವಸ್ಥೆಯ ಎಂಜಿನಿಯರ್ ಎಂದು ಕರೆಯಲಾಗುತ್ತದೆ. ಅಳಿವಿನಂಚಿನ ಪ್ರಬೇಧ ಆಗಿದ್ದರಿಂದ ಅವುಗಳ ಸಂರಕ್ಷಣೆ ಅತಿ ಅಗತ್ಯವಾಗಿದೆ’ ಎನ್ನುತ್ತಾರೆ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಶಿವಕುಮಾರ ಹರಗಿ.

‘ಕಡಲಾಮೆಗಳ ಮೊಟ್ಟೆ ಕಳ್ಳ ಸಾಗಣೆ ಈ ಹಿಂದೆ ಹೆಚ್ಚಿತ್ತು. ಜನರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಈ ಪ್ರಮಾಣ ಕಡಿಮೆಯಾಗಿದೆ. ಆದರೂ, ಮೊಟ್ಟೆ ಇಡುವ ಈ ಅವಧಿಯಲ್ಲಿ ಅರಣ್ಯ ಇಲಾಖೆ ಗಸ್ತು ಹೆಚ್ಚಿಸುವ ಮೂಲಕ ಅವುಗಳ ಸಂರಕ್ಷಣೆ ನಡೆಸುವ ಅನಿವಾರ್ಯತೆ ಇದೆ’ ಎನ್ನುತ್ತಾರೆ ಅವರು.

ಕಡಲಾಮೆಗಳ ಮೊಟ್ಟೆ ಇಟ್ಟ ಮಾಹಿತಿ ನೀಡುವ ಸಾರ್ವಜನಿಕರಿಗೆ ತಲಾ ₹1 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. ಜೊತೆಗೆ ಜಾಗೃತಿ ಕಾರ್ಯಕ್ರಮವೂ ನಡೆಯುತ್ತಿರುವುದರಿಂದ ಮೊಟ್ಟೆ ಸಂರಕ್ಷಣೆ ಪ್ರಮಾಣ ಹೆಚ್ಚುತ್ತಿದೆ
ಕಿರಣ್ ಮನವಾಚಾರಿ ಆರ್ಎಫ್ಒ ಕೋಸ್ಟಲ್ ಮರೈನ್ ವಿಭಾಗ

ಮೊಟ್ಟೆ ಇಡಲು ಅಡೆತಡೆ

‘ಆಲಿವ್ ರಿಡ್ಲೆ ಸೂಕ್ಷ್ಮಜೀವಿ. ಅವು ಮರಿಯಾಗಿ ಹೊರಬಿದ್ದ ಕಡಲತೀರಕ್ಕೆ ಮೊಟ್ಟೆ ಇಡಲು ಬರುತ್ತವೆ. ಹೀಗೆ ಬರುವ ಆಮೆಗಳಿಗೆ ಕಡಲತೀರದಲ್ಲಿನ ಅಭಿವೃದ್ಧಿ ಚಟುವಟಿಕೆಗಳು ಮನುಷ್ಯರ ನಿರಂತರ ಓಡಾಟದಿಂದ ಮೊಟ್ಟೆ ಇಡಲು ಅಡ್ಡಿಯಾಗುತ್ತಿದೆ. ಹೊನ್ನಾವರದ ಟೊಂಕ ಪ್ರದೇಶದಲ್ಲಿ ಈ ಹಿಂದೆ ಅತಿ ಹೆಚ್ಚು ಮೊಟ್ಟೆ ಪತ್ತೆಯಾಗುತ್ತಿತ್ತು. ಆದರೆ ಅಲ್ಲಿ ಬಂದರು ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಿಂದ ಕಡಲಾಮೆಗಳ ಹೆರಿಗೆ ತಾಣವೂ ಬದಲಾಗುತ್ತಿದೆ. ಈ ಪ್ರದೇಶದಿಂದ ಉತ್ತರದತ್ತ ಅವು ವಲಸೆ ಹೋಗುತ್ತಿವೆ’ ಎನ್ನುತ್ತಾರೆ ಕಡಲಾಮೆಗಳ ಮೇಲೆ ಸಂಶೋಧನೆ ನಡೆಸುತ್ತಿರುವ ಎಂ.ಎನ್.ಗುರುಪ್ರಸಾದ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.